ಬೆಂಗಳೂರು : ಜಾತಿ ಗಣತಿ ವರದಿ ಜಾರಿ ಸಂಬಂಧ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಸಚಿವರ ಅಭಿಪ್ರಾಯ ಅಲಿಸಿದ ಸಿಎಂ ಸಿದ್ದರಾಮಯ್ಯ ಒಬ್ಬೊಬ್ಬರು ತಮ್ಮ ನಿಲುವು ತಿಳಿಸಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಈ ವೇಳೆ ಪರವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ವರದಿ ವೈಜ್ಙಾನಿಕವಿದ್ದರೆ ಯಾವುದೇ ಭಿನ್ನಾಬಿಪ್ರಾಯವಿಲ್ಲ. ಸರಿಯಾದ ದತ್ತಾಂಶಗಳಿದ್ದರೆ ಒಪ್ಪಬಹುದು. ಜಾತಿ ಗಣತಿ ವರದಿ ಸೋರಿಕೆಯಾಗಿದೆ ಅಂತ ಊಹಾಪೋಹ ಆಗ್ತಿದೆ.ವರದಿ ವೈಜ್ನಾನಿಕವಾಗಿ ಮಾಡಿಲ್ಲ ಎಂಬ ಮಾತಿದೆ. ಇದರ ಬಗ್ಗೆ ಪರಿಶೀಲಿಸಿ ನಿರ್ಧರಿಸಿ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ವೈಜ್ಙಾನಿಕವರದಿಗೆ ವಿರೋಧವಿಲ್ಲವೆಂದ ಎಂ ಬಿ ಪಾಟೀಲ್, ನಾವು ವರದಿಯನ್ನ ನೋಡಿಲ್ಲ.ವರದಿ ಬಗ್ಗೆ ತಪ್ಪು ಅಭಿಪ್ರಾಯ ಹೋಗುವುದು ಬೇಡ. ಇದನ್ನ ಮತ್ತೊಮ್ಮೆ ಪರಿಶೀಲಿಸಿದರೆ ಉತ್ತಮ ಎಂದು ಡಿಕೆ ಶಿವಕುಮಾರ್ ಹೇಳಿದರು.ಸಂಪುಟ ಉಪಸಮಿತಿ ರಚಿಸಿದರೆ ಉತ್ತಮ.ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನಿಸಿಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯ ಸಂಗ್ರಹ. ತಜ್ಙರನ್ನೊಳಗೊಂಡ ಸಮಿತಿ ರಚನೆಯಾಗಲಿ ಎಂದುಕೆಲವು ಸಚಿವರಿಂದ ಸಲಹೆ ನೀಡಲಾಯಿತು.ಇದಕ್ಕೆ ಪರೋಕ್ಷವಾಗಿಯೇ ವಿರೋಧ ವ್ಯಕ್ತಪಡಿಸಿದ ಕೆಲವರು, ವರದಿಯ ಬಗ್ಗೆ ಅನಯಮಾನವೇ ಬೇಡ.ವರದಿಯನ್ನ ವೈಜ್ಙಾನಿಕವಾಗಿಯೇ ಮಾಡಲಾಗಿದೆ.ವರದಿಯನ್ನ ಒಪ್ಪಿದರೆ ಯಾರಿಗೂ ಸಮಸ್ಯೆಯಾಗಲ್ಲ.ಎಲ್ಲರಿಗೂ ನ್ಯಾಯ ಸಿಗಲಿದೆ. ನೀವೇ ವರದಿಯನ್ನ ಅನುಷ್ಠಾನ ಮಾಡಿ ಎಂದು ಸಚಿವ HC ಮಹದೇವಪ್ಪ ತಿಳಿಸಿದರು.
ಇದ್ದೆ ವೇಳೆ ಗೃಹ ಸಚಿವ ಜಿ.ಪರಮೇಶ್ವರ್, ಬೈರತಿ ಸುರೇಶ್, ಕೆ.ಎಚ್ ಮುನಿಯಪ್ಪ ಸೇರಿದಂತೆ ಜಾತಿಗಣತಿ ವರದಿ ಅನುಷ್ಠಾನ ಮಾಡಬಹುದೆಂದು ಹಲವು ಸಚಿವರಿಂದ ಸಿಎಂ ಸಿದ್ದರಾಮಯ್ಯಗೆ ವರದಿ ಜಾರಿಗೆ ಮಂಡನೆಗೆ ಮನವಿ ಮಾಡಿದರು. ಸಂಪುಟ ಉಪಸಮಿತಿ ರಚನೆ ಬಗ್ಗೆ ನಿರ್ಧಾರ ಸಾಧ್ಯತೆ ಇದ್ದು, ಜಾತಿ ಗಣತಿ ವರದಿಯ ಬಗ್ಗೆ ಗಂಭೀರ ಚರ್ಚೆ ಪರವಿರೋಧ ಅಭಿಪ್ರಾಯಗಳು ವ್ಯಕ್ತವಾಯಿತು. ಸಂಪುಟ ಸಭೆಯಲ್ಲಿ ಜಟಾಪಟಿಹೀಗಾಗಿ ಮುಂದಿನ ಸಂಪುಟ ಸಭೆಯಲ್ಲಿ ನಿರ್ಧಾರಿಸಲಾಗುತ್ತೆ ಎಂದು ತಿಳಿದುಬಂದಿದೆ.
ಈ ಸಂಪುಟದಲ್ಲಿ ಜಾತಿಗಣತಿ ವರದಿ ಮಂಡನೆ ಆಗಿದೆ. ಆದರೆ ಆ ವಿಚಾರದಲ್ಲಿ ಸಮಗ್ರ ಚರ್ಚೆ ಆಗಬೇಕಿದೆ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.ಯಾರೂ ಇದಕ್ಕೆ ವಿರೋಧ ಮಾಡಿಲ್ಲ. ಸಮಗ್ರ ಅಧ್ಯಯನದ ಅವಶ್ಯಕತೆ ಇದೆ.ಹೀಗಾಗಿ ಮುಂದಿನ ಸಂಪುಟದಲ್ಲಿ ಇದರ ಬಗ್ಗೆ ನಿರ್ಧಾರ ಮಾಡಲಾಗತ್ತೆ. ತಮಿಳು ನಾಡು,ಹಾಗೂ ಆಂದ್ರ ಮಾಡೆಲ್ ಗಳ ಬಗ್ಗೆ ಚರ್ಚೆ ಮಾಡಲಾಗಿದೆ. ತಮಿಳುನಾಡು ಮಾದರಿಯನ್ನೇ ಇಲ್ಲಿ ಅನುಸರಿಸಿದ್ರೆ ಸೂಕ್ತ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
ಸಂಪುಟ ಸಭೆ ಬಳಿಕ ಸಚಿವರಾದ ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್,ಚಲುವರಾಯಸ್ವಾಮಿ, ಹಾಗೂ ಸಂತೋಷ್ ಲಾಡ್ ಮಾಧ್ಯಮ ಪ್ರತಿಕ್ರಿಯೆ ಸಂಪುಟ ಸಭೆ ಬಳಿಕ ಸಚಿವ ಎಚ್ ಕೆ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಇಂದಿನ ಸಂಪುಟದಲ್ಲಿ 25 ವಿಚಾರಗಳನ್ನ ಚರ್ಚಿಸಲಾಗಿದೆ. ಗುತ್ತಿಗೆದಾರರ ಸಂಘ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಾಗಮೋಹನ್ ದಾಸ್ ಅವರ ಸಮಿತಿ ಆಯೋಗ ರಚಿಸಿ ವಿಚಾರಣೆ ಮಾಡಲಾಗಿತ್ತು.ಇಂದು ಆ ವರದಿ ಸಂಪುಟದಲ್ಲಿ ಮಂಡನೆಯಾಗಿದೆ. ಈ ವಿಚಾರಣೆ ಆಯೋಗ ನೀಡಿರುವ ಶಿಫಾರಸ್ಸು ನೀಡಿದೆ. ಮೂರು ಲಕ್ಷ ಕಾಮಗಾರಿಗಳಲ್ಲಿ 1,7 29 ಕಾಮಗಾರಿಗಳ ಬಗ್ಗೆ ಆಪಾದನೆ ಬಂದಿತ್ತು.ಗಂಭೀರ ವರದಿ ಹಿನ್ನೆಲೆಯಲ್ಲಿ ಎಸ್ ಐಟಿ ರಚನೆಗೆ ಶಿಫಾರಸ್ಸು ಮಾಡಿದೆ. ಅಗತ್ಯ ಪರಿಣಿತರನ್ನ ಅದರಲ್ಲಿ ಸೇರಿಸಿ ತನಿಖೆಗೆ ಮಾಡಲು ಸೂಚಿಸಲಾಗಿದೆ.
ಎರಡು ತಿಂಗಳಲ್ಲಿ ಎಸ್ ಐಟಿ ಇದರ ಕುರಿತ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.40% ಕಮಿಷನ್ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿಲ್ಲ.ಬದಲಿಗೆ ಲಂಚ ಸ್ವೀಕಾರವಾಗಿದೆ ಅನ್ನೋದನ್ನ ವರದಿಯಲ್ಲಿ ತಿಳಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಾಗಿದ್ದ 40% ಕಮಿಷನ್ ಆರೋಪದ ತನಿಖೆ ವಿಚಾರವಾಗಿ ನಾಗಮೋಹನ್ ದಾಸ್ ಅವರ ಆಯೋಗ ಇದರ ವರದಿ ತಯಾರಿಸಿತ್ತು ನೈಸ್ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆದಿದೆ.ಹೈ ಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನಲ್ಲಿ ಇದರ ಬಗ್ಗೆ ವಾದ ವಿವಾದ ನಡೆದಿದೆ.ಅವರಿಗೆ ಕೊಟ್ಟ ಜಮೀನು,ಮತ್ತು ಕಾಮಗಾರಿ ಬಗ್ಗೆ ಹಲವು ಚರ್ಚೆ ನಡೆದಿತ್ತು.ಹೀಗಾಗಿ ಈ ವಿಚಾರದಲ್ಲಿ ಸಂಪುಟದ ಉಪ ಸಮಿತಿಯನ್ನ ನೇಮಕ ಮಾಡಲು ನಿರ್ಧರಿಸಿದೆ.ಸಿಎಂ ಇದರ ಮುಖ್ಯಸ್ಥರಾಗಿರುತ್ತಾರೆ. ಎಂದು ಎಚ್ ಕೆ ಪಾಟೀಲ್ ತಿಳಿಸಿದರು.
ಜಾತಿ ಗಣತಿ ವರದಿ ಮಂಡನೆ ವಿಚಾರವಾಗಿ ಹಿಂದುಳಿದ ವರ್ಗದ ಆಯೋಗ ಸಚಿವ ಶಿವರಾಜ್ ತಂಗಡಗಿ ಹೇಳಿಕೆ ನೀಡಿದ್ದು, ಎರಡು ಬಾಕ್ಸ್ ವರದಿ ನಮಗೆ ಸಲ್ಲಿಕೆಯಾಗಿತ್ತು.ಇದ್ರಲ್ಲಿ ಜಾತಿವಾರು, ಕ್ಷೇತ್ರವಾರು ಅಂಕಿ ಅಂಶಿ ಹೊಂದಿದ್ದ ವರದಿಗಳನ್ನ ಅಡಕವಾಗಿಸಲಾಗಿತ್ತು.ಪ್ರತಿ ಬಾಕ್ಸ್ ನಲ್ಲಿ 13 ಸಂಪುಟಗಳಿತ್ತು. ಕುಟುಂಬ, ಜಿಲ್ಲಾವಾರು ಮಾಹಿತಿ ಗಳು ಸಂಪುಟದಲ್ಲಿದ್ದವು.ಒಟ್ಟು 50 ಸಂಪುಟಗಳ ವರದಿಯನ್ನ ಸಂಪುಟದ ಮುಂದಿಡಲಾಗಿತ್ತು.ಮುಂದಿನ ಸಂಪುಟದಲ್ಲಿ ಎಲ್ಲ ವಿವರಗಳ ಕುರಿತು ಚರ್ಚೆ ಮಾಡಲು ನಿರ್ಧರಿಸಲಾಗಿದೆ. 2011ರ ಸಮೀಕ್ಷೆ ಪ್ರಕಾರ 2,11ಕೋಟಿ ಜನಸಂಖ್ಯೆ ಇತ್ತು. 2015 ರ ಸಮೀಕ್ಷೆಯಲ್ಲಿ 5 ಕೋಟಿ 98 ಲಕ್ಷ ಜನಸಂಖ್ಯೆ ಸಮೀಕ್ಷೆಗೆ ಒಳಪಟ್ಟಿದೆ.ಒಂದು ಕೋಟಿ ಜನರ ಮಾಹಿತಿ ಇದ್ರಲ್ಲಿದೆ. 5.83% ಜನ ಸಮೀಕ್ಷೆಯಿಂದ ಮಿಸ್ ಆಗಿದ್ದಾರೆ ಎಂದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, ಕ್ಯಾಬಿನೆಟ್‌ನಲ್ಲಿ ಜಾತಿಗಣತಿ ವರದಿ ಮಂಡಣೆಯಾಗಿದೆ. ಸಿಎಂ ವಿಶೇಷ ಕ್ಯಾಬಿನೆಟ್ ಕರೆದಿದ್ದಾರೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡ್ತೇವೆ.ತಮಿಳುನಾಡಿನ ರೀತಿ ರಿಸರ್ವೇಶನ್ ಹೆಚ್ಚಿಸಬೇಕು. 10 %ರಿಸರ್ವೇಶನ್ ಕ್ರಿಮಿಲೇಯರ್‌ನಲ್ಲಿ ಕೊಟ್ಟಿದ್ದಾರಲ್ಲ? ಅದು ಯಾರಿಗೆ ಉಪಯೋಗ? ಯಾರು 10% ವ್ಯಾಪ್ತಿಗೆ ಬರ್ತಾರೆ, ಹೀಗಾಗಿ ರಿಸರ್ವೇಶನ್ ಹೆಚ್ಚಾದರೆ ಎಲ್ಲರಿಗೂ ಉಪಯೋಗಕ್ಕೆ ಬರುತ್ತೆಸಚಿವ ಸಂತೋಷ್ ಲಾಡ್ ಎಂದು ಹೇಳಿದರು.
ಜಾತಿ ಗಣತಿ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ವರದಿ ಇಂದು ಮಂಡನೆಯಾಗಿದೆ ಕೆಲವು ಸಚಿವರು ಅಧ್ಯಯನ ಆಗಬೇಕು ಅಂದಿದ್ದಾರೆ. ಮುಂದಿನ ಗುರುವಾರ ಸಭೆಯಲ್ಲಿ ಚರ್ಚೆ ಆಗಲಿದೆ.ಮುಂದಿನ ಸಂಪುಟದಲ್ಲಿ ನಾವು ಚರ್ಚೆ ಮಾಡ್ತೇವೆ.ಆನಂತರ ತೀರ್ಮಾನ ಮಾಡ್ತೇವೆ.ಗುತ್ತಿಗೆದಾರರ ಆರೋಪ ವಿಚಾರವಾಗಿ ಇದರ ಬಗ್ಗೆ ಹೆಚ್ ಕೆ ಪಾಟೀಲ್ ಮಾತಾಡ್ತಾರೆ ಎಂದರು.
ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಇಂದು ವರದಿ ಮಂಡನೆ ಮಾಡಿದ್ದಾರೆ ವರದಿಗೆ ಯಾರು ವಿರೋಧ ಮಾಡಿಲ್ಲ. ಇದೇ ತಿಂಗಳು 17 ರಂದು ಮತ್ತೊಂದು ಕ್ಯಾಬಿನೇಟ್ ಸಭೆ ಕರೆದಿದ್ದೇವೆ.ಅಂದು ಅದು ಒಂದೇ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ಮಾಡುತ್ತೇವೆ.ಅಂದು ಸಮಗ್ರವಾಗಿ ಚರ್ಚೆ ಮಾಡುತ್ತೇವೆ.ಅಧ್ಯಯನ ಸಮಿತಿ ಯಾವುದು ಏನೂ ಇಲ್ಲ ಎಂದರು. HK ಪಾಟೀಲ್ ಮಾತನಾಡಿ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಸೈಟ್ ವಿಚಾರ ತಾಂತ್ರಿಕ ಮಾಹಿತಿ ಕಲೆ ಹಾಕ ಬೇಕಿರುವ ಕಾರಣ ಅದನ್ನ ಡೆಫರ್ ಮಾಡಲಾಗಿದೆ ಎಂದು ತಿಳಿಸಿದರು.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಸಂಪುಟದ ಮುಂದೆ ವರದಿ ಮಂಡನೆ ಆಗಿದೆ. ಎಲ್ಲರ ಸಹಮತದಿಂದ ವರದಿ ಸ್ವೀಕರಿಸಲಾಗಿದೆ. ವರದಿಯಲ್ಲಿರುವ ಅಂಶ ಬಹಿರಂಗವಾಗಿಲ್ಲ. ಆ ಮಾಹಿತಿ ಚರ್ಚೆಗೆ ಮುಂದಿನ ಕ್ಯಾಬಿನೆಟ್ ಕರೆಯಲಾಗಿದೆ. ಮಾಧ್ಯಮಗಳಲ್ಲಿ ಬರುತ್ತಿರೋ ಜಾತಿವಾರು ಲೆಕ್ಕಾಚಾರಗಳು ಸತ್ಯಕ್ಕೆ ದೂರವಾದದ್ದು ಸಚಿವನಾಗಿ ನಾನೇ ಅದನ್ನ ನೋಡಿಲ್ಲ ಅಂದ ಮೇಲೆ ಮಾಹಿತಿ ಹೇಗೆ ಲೀಕ್ ಆಗತ್ತೆ? ನಮ್ಮ ಸರ್ಕಾರಕ್ಕೆ ಬದ್ದತೆ ಇದೆ. ವರದಿ ಜಾರಿ ಆಗತ್ತೆ ಎಂದು ತಿಳಿಸಿದರು.