ಬೆಂಗಳೂರು : ಜಾತಿ ಗಣತಿ ವರದಿ ಅನುಷ್ಟಾನ ವಿಚಾರಕ್ಕೆ ಸಂಬಂಧಿಸಿದಂತೆ ಏ.17 ರಂದು ಸಂಜೆ 4 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆ ನಿಗದಿಯಾಗಿದೆ.ಏ.17 ರಂದು ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಜಾತಿ ಗಣತಿ ವರದಿ ಅನುಷ್ಟಾನ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲಿದೆ.
ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಅನುಷ್ಠಾನ ಕುರಿತು ದೀರ್ಘ ಚರ್ಚೆ ಆಯಿತು. ಆದರೆ ಏಪ್ರಿಲ್ 17ರಂದು ರಾಜ್ಯ ಸರ್ಕಾರ ವಿಶೇಷ ಸಂಪುಟ ಸಭೆ ನಿಗದಿ ಮಾಡಿದ್ದು, ಏಪ್ರಿಲ್ 17ರಂದು ಸಂಜೆ 4 ಗಂಟೆಗೆ ವಿಶೇಷ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಜಾರಿ ಆಗುವ ಕುರಿತು ಮಹತ್ವದ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
ಇಂದು ನಡೆದ ಸಂಪುಟ ಸಭೆಯಲ್ಲಿ ಸಂಪುಟ ಸಭೆಯಲ್ಲಿ ಸಚಿವರು ಯಾವುದೇ ಅಭಿಪ್ರಾಯವನ್ನು ಮಂಡಿಸಿಲ್ಲ.ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸಚಿವರು ಪರ ಮತ್ತು ವಿರೋಧ ಚರ್ಚೆ ಸಹ ಮಾಡಲಿಲ್ಲ. ಕೇವಲ ವರದಿ ಮಂಡಿಸಿ ಸಚಿವರು ಅಧಿಕಾರಿಗಳಿಂದ ಸಾರಾಂಶವನ್ನು ಕೇಳಿದ್ದಾರೆ.