ಅಹಮದಾಬಾದ್: ಎಲ್ಲಿಸ್ಬ್ರಿಡ್ಜ್ನಲ್ಲಿರುವ ವಾಣಿಜ್ಯ ಸಂಕೀರ್ಣದ ಐದನೇ ಮಹಡಿಯಿಂದ ಬಿದ್ದು 17 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಆನ್ಲೈನ್ ಗೇಮಿಂಗ್ನಿಂದ ಉಂಟಾದ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇದಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಶನಿವಾರ ರಾತ್ರಿ, ಅಮರೈವಾಡಿಯ 17 ವರ್ಷದ ಬಾಲಕನನ್ನು ಅಸರ್ವಾದ ಸಿವಿಲ್ ಆಸ್ಪತ್ರೆಯ ಆಘಾತ ವಾರ್ಡ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ದಾಖಲಿಸಲಾಯಿತು. ಎಲ್ಲಿಸ್ಬ್ರಿಡ್ಜ್ನ ವಿಎಸ್ ಆಸ್ಪತ್ರೆ ಬಳಿಯ ಮೆಹ್ತಾ ಕಾಂಪ್ಲೆಕ್ಸ್ನ ಐದನೇ ಮಹಡಿಯಿಂದ ಬಿದ್ದು ಅವನಿಗೆ ಗಂಭೀರ ಗಾಯಗಳಾಗಿದ್ದವು ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಅಮ್ರೈವಾಡಿಯ ನಿವಾಸಿಯಾದ ಬಾಲಕ ಸನಂದ್ ಸರ್ಕಲ್ ಬಳಿಯ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಎಂದು ಆತನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದ ವಿವರಗಳ ಪ್ರಕಾರ, ಏಪ್ರಿಲ್ 5 ರ ರಾತ್ರಿ, ಆತನ ಬ್ಯಾಂಕ್ ಖಾತೆಯಿಂದ 36,500 ರೂ. ಡೆಬಿಟ್ ಆಗಿರುವುದನ್ನು ತಂದೆ ಗಮನಿಸಿದ್ದಾರೆ. ಪರೀಕ್ಷಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಎಲಿಸ್ಬ್ರಿಡ್ಜ್ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದಾರೆ.