ತುಮಕೂರು : ತುಮಕೂರು ನಗರದ ರೈಲು ನಿಲ್ದಾಣಕ್ಕೆ ಡಾ. ಶಿವಕುಮಾರ ಸ್ವಾಮೀಜಿ ಹೆಸರು ಇಡುವ ಬಗ್ಗೆ ಗೃಹ ಸಚಿವ ಡಾ.ಪರಮೇಶ್ವರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ದಗಂಗಾ ಶ್ರೀಗಳ ಹೆಸರಿಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚಿಸಿ ಒಪ್ಪಿಗೆ ಪಡೆದು ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.
ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ದಗಂಗಾ ಶ್ರೀಗಳ ಹೆರಿಟ್ಟರೆ ಶಾಶ್ವತವಾಗಿ ಉಳಿಯಲಿದೆ. ಶ್ರೀಗಳ ಹೆಸರಿಡುವ ಬಗ್ಗೆ ಕೇಂದ್ರ ಸಚಿವ ವಿ.ಸೋಮಣ್ಣ ಪ್ರಸ್ತಾಪಿಸಿದ್ದರು. ಅವರ ಇಲಾಖೆಯಿಂದ ಶ್ರೀಗಳ ಹೆಸರಿಡಲು ಕೇಂದ್ರದಿಂದ ಮಂಜೂರು ಸಿಕ್ಕಿದೆ. ಶ್ರೀಗಳ ಹೆಸರಿಡುವ ವಿಚಾರದಲ್ಲಿ ವಿಳಂಬವಾಗಿಲ್ಲ ಎಂದು ತಿಳಿಸಿದ್ದಾರೆ.