ಚಿಕ್ಕಮಗಳೂರು : ಐಪಿಎಲ್ ಅನ್ನು ಕ್ರಿಕೆಟ್ ಪ್ರೀಯರಿಗೆ ಹಬ್ಬದ ಊಟ ಅಂತಲೇ ಕರೆಯಲಾಗುತ್ತೆ. ಇದೀಗ ಐಪಿಎಲ್ ಬೆಟ್ಟಿಂಗ್ ತಂದೆ ನಡೆಸುತ್ತಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಆತನ ಬಳಿದ್ದ ನಗದು ಹಣ ಹಾಗೂ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆ ಪೊಲೀಸರು ಬೆಟ್ಟಿಂಗ್ ನಡೆಸುತ್ತಿದ್ದ ಹರೀಶ್ ಎನ್ನುವವನ್ನು ನನ್ನ ಬಂಧಿಸಿದ್ದಾರೆ. ಕೊಟ್ಟಿಗೆಹಾರ ಪಟ್ಟಣದ ಬಾರ್ ಮುಂದೆ ನಡೆಸುತ್ತಿದ್ದ 12 ಜನರ ತಂಡ ಮಾಡಿಕೊಂಡು ಹರೀಶ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಬುಕ್ಕಿ ಹರೀಶ್ ಅನ್ನು ಬಂಧಿಸಿ 8500 ನಗದು ಹಾಗೂ ಹಲವು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.