ಕಲಬುರಗಿ : ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ಕಲಬುರಗಿಯಲ್ಲಿ ಎಟಿಎಂ ಒಡೆದು ಬರೋಬ್ಬರಿ 18 ಲಕ್ಷ ರೂ. ಕದ್ದು ಖದೀಮರ ಗ್ಯಾಂಗ್ ಪರಾರಿಯಾಗಿದೆ.
ಕಲಬುರಗಿಯ ರಿಂಗ್ ರೋಡ್ ಬಳಿಯ ಪೂಜಾರಿ ಚೌಕ್ ನಲ್ಲಿರುವ ಎಸ್ ಬಿಐ ಬ್ಯಾಂಕ್ ನಲ್ಲಿ ತಡರಾತ್ರಿ 3 ಗಂಟೆ ಸುಮಾರಿಗೆ ಖದೀಮರು ಎಟಿಎಂ ಒಡೆದು 18 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಸಿಬ್ಬಂದಿಗಳು ಎಟಿಎಂಗೆ ಹಣ ಹಾಕಿದ್ದರು. ಇದನ್ನು ಗಮನಿಸಿರುವ ಕಳ್ಳರು, ತಡರಾತ್ರಿ 3 ಗಂಟೆ ಸುಮಾರಿಗೆ ಐ20 ಕಾರಿನಲ್ಲಿ ಬಂದು ಗ್ಯಾಸ್ ಬಟರ್ ಬಳಸಿ ಎಟಿಎಂ ಒಡೆದು 18 ಲಕ್ಷ ರೂ. ದೂಚಿ ಪರಾರಿಯಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.