ಬೆಂಗಳುರು : ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರುಗಳು ಏಜೆನ್ಸಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಟಿಪ್ಪಣಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರುಗಳು ಏಜೆನ್ಸಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು, ಅಭಿಪ್ರಾಯ/ಸಲಹೆಗಳನ್ನು ಕೋರಿದ್ದು, ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದಲ್ಲಿ ಕಾರ್ಯನಿವರ್ಹಿಸುತ್ತಿರುವ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಗಳು/ಶೋಷಣೆಯಿಂದ ರಕ್ಷಿಸುವ ಕುರಿತು ಅಭಿಪ್ರಾಯ/ಸಲಹೆಗಳು
1. 2025-26ನೇ ಸಾಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ Consumer Price Index ಆಧಾರದ ಮೇಲೆ ವೇತನ ನಿಗದಿಪಡಿಸುತ್ತಿದ್ದು. ಸದರಿ Consumer Price Index Numbers for Industrial workers ವಿವರ ಕೆಳಕಂಡಂತಿದೆ:-
ಮೇಲ್ಕಂಡ ಕೋಷ್ಟಕದಂತೆ 2018ರ Consumer price index ಆಧಾರದ ಮೇಲೆ 2025-26ನೇ ಸಾಲಿನ ವೇತನವನ್ನು ನಿಗದಿಪಡಿಸಿರುವ ಕಾರ್ಮಿಕ ಇಲಾಖೆಯ ದರಗಳಂತೆ ಸಿಬ್ಬಂದಿಗಳಿಗೆ ವೇತನ ಪಾವತಿಸಲು ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿರುವುದರಿಂದ, ಸದರಿ ದರಗಳಂತೆ ಟೆಂಡರ್ ಕರೆಯಲು 2 ಅಥವಾ 3 ಮಾಹೆಗಳ ಕಾಲಾವಕಾಶ ತೆಗೆದುಕೊಳ್ಳುವುದರಿಂದ, ಕಾಲಕಾಲಕ್ಕೆ ಸಿಬ್ಬಂದಿಗಳಿಗೆ ವೇತನ ಪಾವತಿಯಾಗುತ್ತಿಲ್ಲ ಹಾಗೂ ಸದರಿ ಅವಧಿಯಲ್ಲಿ ಸಿಬ್ಬಂದಿಗಳು PF, EST ಸರಿಯಾಗಿ ಜಮೆಯಾಗುತ್ತಿಲ್ಲ 2
303 20180 Consumer price index espades wheel 2025 20 ಸಾಲಿನ ವೇತನವನ್ನು ನಿಗದಿಪಡಿಸಿರುವುದರಿಂದ ಸಿಬ್ಬಂದಿಗಳ ಜೀವನ ಮಟ್ಟ ಕುಸಿದಿದ್ದು ಜೀವನಾವಶ್ಯಕ ವಸ್ತಗಳ ಬೆಲೆಗಳು ಗಗನಮುಖಿಯಾಗಿರುತ್ತದೆ, ಆದ್ದರಿಂದ ಮಸ್ತು ಬೆಲೆಗಳನ್ನಾಧರಿಸಿ, ಸಿಬ್ಬಂದಿಗಳಿಗೆ ಕನಿಷ್ಟ ಮಾಸಿಕ ರೂ.25,000/- ಗಳನ್ನು ನಿಗದಿಪಡಿಸಬೇಕಾಗಿರುತ್ತದೆ(ಸೇವಾ ತೆರಿಗೆಗಳನ್ನು ಹೊರತುಪಡಿಸಿ).
2. ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿದ್ದು, ಸದರಿ ಸಿಬ್ಬಂದಿಗಳಿಗೂ ಪ್ರಸ್ತುತ ಕೆಲಸಕ್ಕೆ ಸೇರಿದ ಸಿಬ್ಬಂದಿಗಳಿಗೂ ಒಂದೇ ಸಮಾನ ವೇತನ ಪಾವತಿಸುವುದರ ಬದಲಾಗಿ ಈ ಕೆಳಕಂಡ ಕೋಷ್ಟಕದಂತೆ ಸಿಬ್ಬಂದಿಗಳ ಸೇವಾವಧಿಯನ್ನಾಧರಿಸುವುದು ನ್ಯಾಯ ಸಮ್ಮತವಾಗುತ್ತದೆ.
3. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ, ಪದವಿ/ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿರುವ ವಿದ್ಯಾರ್ಥಿಗಳು/ಪದವಿಧರರು ಜೀವನ ನಿರ್ವಹಣೆಗಾಗಿ ಲಭ್ಯವಾಗುವ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರ ಜವಾಬ್ದಾರಿಯುತ ಕಾರ್ಯ ನಿರ್ವಹಣೆಯನ್ನು ಪರಿಗಣಿಸಿ, ಕನಿಷ್ಠ ಗ್ರೂಪ್ ‘ಸಿ’ ಗೆ ನೀಡುವ ದರಗಳಂತೆ ಕೆಲವು ಸೌಲಭ್ಯಗಳನ್ನು ನೀಡಿ ಸೂಕ್ತ ಆದೇಶ ಹೊರಡಿಸಿದ್ದಲ್ಲಿ ಸಿಬ್ಬಂದಿಗಳು ಕೃತಜ್ಞತಾ ಭಾವದಿಂದ ಕಾರ್ಯನಿರ್ವಹಿಸುತ್ತಾರೆ ಎಂಬ ಸಲಹೆ/ಅಭಿಪ್ರಾಯ ನೀಡಲಾಗಿದೆ.