ಬೆಂಗಳೂರು: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ರಾಷ್ಟ್ರಪತಿ ಭವನ, ಸಂಸತ್ ಭವನದ ಮಾದರಿಯಲ್ಲೇ ವಿಧಾನಸೌಧಕ್ಕೂ ಭೇಟಿ ನೀಡಲು ಶುಲ್ಕವನ್ನು ನಿಗದಿಪಡಿಸಲಾಗುತ್ತಿದೆ. ವಿಧಾನಸೌಧ ಟೂರ್ ಗೈಟ್ ಜಾರಿಗೊಳಿಸಿದ್ದು, ಇದರಡಿ ವಿಧಾನಸೌಧ ವೀಕ್ಷಣೆಗೆ ಜನರು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ನವದೆಹಲಿಯಲ್ಲಿನ ರಾಷ್ಟ್ರಪತಿ ಭವನ ಹಾಗೂ ಸಂಸತ್ ಭವನ ವೀಕ್ಷಣೆಗೆ ಶುಲ್ಕವಿದೆ. ಅದೇ ಮಾದರಿಯಲ್ಲಿ ವಿಧಾನಸೌಧ ವೀಕ್ಷಣೆಗೂ ಪ್ರವಾಸಿಗರಿಗೆ ಟೂರ್ ಗೈಟ್ ಅನ್ನು ಸರ್ಕಾರ ಏರ್ಪಡಿಸುತ್ತಿದೆ.
ಸಾರ್ವಜನಿಕ ರಜಾ ದಿನಗಳಂದು ಮಾತ್ರವೇ ಈ ಟೂರ್ ಗೈಡ್ ವ್ಯವಸ್ಥೆ ಮಾಡಲಾಗುತ್ತಿದ್ದು, ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ವಿಧಾನಸೌಧ ವೀಕ್ಷಣೆಗೆ ಪ್ರವಾಸಿಗರು ಶುಲ್ಕ ಪಾವತಿಸಿ, ವೀಕ್ಷಣೆ ಮಾಡಬಹುದಾಗಿದೆ.
ಅಂದಹಾಗೇ ಸಾರ್ವಜನಿಕ ರಜಾ ದಿನಗಳಂದು ತಲಾ 30ರಂತೆ ತಂಡಗಳನ್ನು ವಿಭಜಿಸಿ, ವಿಧಾನಸೌಧ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಈ ಪ್ರತಿ ತಂಡದ ಮೇಲ್ವಿಚಾರಣೆಗೆ ಪ್ರವಾಸೋಧ್ಯಮ ಇಲಾಖೆಯ ಅಧಿಕಾರಿಯೊಬ್ಬರು ಇರುತ್ತಾರೆ. ಇದರ ಉಸ್ತುವಾರಿಯನ್ನಾಗಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ.
ಪ್ರವಾಸಿಗರು ಅಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ರೂಟ್ ಮ್ಯಾಪ್ ನಂತೆ ವಿಧಾನಸೌಧ ವೀಕ್ಷಣೆ ಮಾಡಿಸಬೇಕು. ವಿಧಾನಸೌಧಕ್ಕೆ, ಉದ್ಯಾನವನ, ಪ್ರತಿಮೆಗಳಿಗೆ ಯಾವುದೇ ಹಾನಿ ಉಂಟು ಮಾಡದಂತೆ ಟೂರ್ ವ್ಯವಸ್ಥೆ ಮಾಡುವುದು ಸೇರಿದಂತೆ ವಿವಿಧ ಷರತ್ತುಗಳನ್ನು ವಿಧಿಸಲಾಗುತ್ತದೆ.
SHOCKING: ಕರ್ನಾಟಕದಲ್ಲಿ ‘ಬ್ರ್ಯಾಂಡೆಡ್ ಕಂಪನಿ’ಯ ‘ಕುಡಿಯೋ ನೀರಿನ ಬಾಟಲಿ’ಯಲ್ಲೂ ರಾಸಾಯನಿಕ ಪತ್ತೆ
BIG NEWS: ರಾಜ್ಯದಲ್ಲಿ ಮಾರಾಟವಾಗುತ್ತಿರುವ ‘ಔಷಧಿಗಳ ಗುಣಮಟ್ಟ’ದ ಬಗ್ಗೆ ‘ಆರೋಗ್ಯ ಇಲಾಖೆ’ ಶಾಕಿಂಗ್ ಮಾಹಿತಿ ಬಿಡುಗಡೆ
BREAKING: ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಮಾಹಿತಿ