ಬೆಂಗಳೂರು: ಇಂದು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಈ ಬೆನ್ನಲ್ಲೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ಕ್ಕೆ ಪುನರಾವರ್ತಿತ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡಲಾಗಿದೆ. ಆ ಬಗ್ಗೆ ಮಾಹಿತಿ ಮುಂದಿದೆ ಓದಿ.
ಈ ಬಗ್ಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ಮಾಪನ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು ಪರೀಕ್ಷೆ-2ಕ್ಕೆ ಪರೀಕ್ಷಾ ಶುಲ್ಕ ಪಾವತಿಸಲು ಹಾಗೂ ಪುನರಾವರ್ತಿತ ಅಪೂರ್ಣ ಹಾಗೂ ಫಲಿತಾಂಶ ಉತ್ತಮ ಪಡಿಸಿಕೊಳ್ಳುವ ವಿದ್ಯಾರ್ಥಿಗಳು ಮಾಹಿತಿಯನ್ನು ಪ್ರಾಂಶುಪಾಲರು ಪರೀಕ್ಷಾ ತಂತ್ರಾಂಶದಲ್ಲಿ ಇಂದೀಕರಿಸಲು ದಂಡ ರಹಿತ ಕೊನೆಯ ದಿನಾಂಕ 08-04-2025ರಿಂದ 15-04-2025 ಆಗಿರುತ್ತದೆ. ದಂಡ ಸಹಿತ ಕೊನೆಯ ದಿನಾಂಕ 16-04-2025 ರಿಂದ 17-04-2025 ಆಗಿದೆ.
ಪ್ರಾಂಶುಪಾಲರು ಪರೀಕ್ಷಾ ಶುಲ್ಕವನ್ನು ಒಂದೇ ಕಂತಿನಲ್ಲಿ ಸಂದಾಯ ಮಾಡಬೇಕಾದ ಕೊನೆಯ ದಿನಾಂಕ ದಂಡ ರಹಿತ 16-04-2025 ಆಗಿದ್ದರೇ, ದಂಡ ಸಹಿತ 19-04-2025 ಆಗಿದೆ. ಪ್ರಾಂಶುಪಾಲರು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ್ ಸಹಿತ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಲು ದಿನಾಂಕ 16-04-2025ರಿಂದ 19-04-2025 ಆಗಿದೆ.
ಇವರಿಗೆ ಪರೀಕ್ಷಾ ಶುಲ್ಕದಿಂದ ವಿನಾಯ್ತಿ
ಎಲ್ಲಾ ವರ್ಗದ ಬಾಲಕಿಯರು ಮತ್ತು ಪರಿಶಿಷ್ಟ ಜಾತಿ, ಪಂಗಡ ಮತ್ತು ವರ್ಗ-1ರ ಬಾಲಕರಿಗೆ ಪುನರಾವರ್ತಿತ ಅಪೂರ್ಣ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಲು ಪರೀಕ್ಷಾ ಶುಲ್ಕ ಇರುವುದಿಲ್ಲ ಎಂಬುದಾಗಿ ತಿಳಿಸಿದೆ.
ಹೀಗಿದೆ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪರೀಕ್ಷಾ ಶುಲ್ಕ
ಒಂದು ವಿಷಯಕ್ಕೆ ರೂ.140, ಎರಡು ವಿಷಯಕ್ಕೆ ರೂ.270, ಮೂರು ಅಥವಾ ಹೆಚ್ಚಿನ ವಿಷಯಗಳಿಗೆ ರೂ.400 ಆಗಿದೆ.
ಇನ್ನೂ ಫಲಿತಾಂಶ ಉತ್ತಮಪಡಿಸಿಕೊಳ್ಳಲುವ ವಿದ್ಯಾರ್ಥಿಗಳಿಗೆ ಒಂದು ವಿಷಯಕ್ಕೆ ಪ್ರಥಮ ಬಾರಿಗೆ ರೂ.175, ಒಂದು ವಿಷಯಕ್ಕೆ ಎರಡನೇ ಬಾರಿಗೆ ರೂ.350 ಶುಲ್ಕವನ್ನು ನಿಗದಿ ಪಡಿಸಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ದಿನಾಂಕ 08-04-2025ರಿಂದ 17-04-2025ರವರೆಗೆ ತಮ್ಮ ಕಾಲೇಜಿನಲ್ಲಿ ನೋಂದಾಯಿಸಿಕೊಳ್ಳಬಹುದು ಎಂಬುದಾಗಿ ತಿಳಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-1ರ ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ, ಮರು ಮೌಲ್ಯ ಮಾಪನದ ಬಗ್ಗೆ ಇಲ್ಲಿದೆ ಮಾಹಿತಿ
BREAKING: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ಯಾದಗಿರಿಗೆ ಕೊನೆ ಸ್ಥಾನ