ಬೆಂಗಳೂರು : ರಾಜ್ಯದಲ್ಲಿ ಆಹಾರ ಇಲಾಖೆ ಸಮರ ಸಾರಿದ್ದು, ಆಹಾರ ಗುಣಮಟ್ಟಗಳ ಕುರಿತಂತೆ ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಕಡೆಗಳಲ್ಲಿ ಹಲವು ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಿ ಕೆಲವನ್ನು ಈಗಾಗಲೇ ಬ್ಯಾನ್ ಮಾಡಿದೆ. ಇದೀಗ ಐಸ್ ಕ್ರೀಮ್ ಮತ್ತು ಪನ್ನೀರ್ ಆದ ಬಳಿಕ ತುಪ್ಪ ಹಾಗು ಕೋವಾ ಸರದಿ ಆಗಿದ್ದು, ಕೋವಾದಲ್ಲೂ ಕೂಡ ಕಲಬೆರಿಕೆ ಅಂಶ ಇದೀಗ ಆಹಾರ ಇಲಾಖೆಯ ಪರೀಕ್ಷೆಯಲ್ಲಿ ಹಾನಿಕಾರಕ ಅಂಶ ಬಯಲಾಗಿದೆ ಎಂದು ಆಹಾರ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರಿನ ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಸಿಹಿ ತಿಂಡಿಗಳಿಗೆ ಬಳಸುವ ಕೋವಾದಲ್ಲಿ ಕಲಬೆರಿಕೆ ಅಂಶ ಬಯಲಾಗಿದೆ. ಕೋವಾದಲ್ಲಿ ಕಲಬೆರಿಕೆ ವಿಚಾರ ಇದೀಗ ಬಹಿರಂಗವಾಗಿದೆ. ಆಹಾರ ಇಲಾಖೆ ಪರೀಕ್ಷೆಯಲ್ಲಿ ಇದೀಗ ಕಲಬೆರಿಕೆ ಬಯಲಾಗಿದೆ. ಐಸ್ ಕ್ರೀಮ್ ಪನ್ನೀರ್ ಆಯ್ತು ಇದೀಗ ಕೊವಾದಲ್ಲಿ ಕಲಬರಿಕೆ ಅಂಶ ಪತ್ತೆಯಾಗಿದ್ದು ಹಾಗಾಗಿ ಜನರು ಈ ಕುರಿತು ಎಚ್ಚರಿಕೆ ವಹಿಸಬೇಕು .
ಇನ್ನು 296 ಕುಡಿಯುವ ನೀರಿನ ಬಾಟಲ್ ಗಳ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 72 ಸುರಕ್ಷಿತ ಅಂತ ವರದಿ ಬಂದಿದೆ. 95 ಮಾದರಿಗಳು ಅಸುರಕ್ಷಿತ ಎಂದು ವರದಿ ಬಂದಿದೆ. ಹಾಗು 88 ಮಾದರಿಗಳು ಕಳಪೆ ಗುಣಮಟ್ಟ ಅಂತ ವರದಿಯಾಗಿದೆ. ಇನ್ನು ಪನ್ನೀರ್ 231 ಮಾದರಿ ಟೆಕ್ಸ್ಟ್ ಅಲ್ಲಿ 2 ಮಾದರಿ ಅಸುರಕ್ಷಿತ ಎಂದು ಬಂದಿದೆ ಎಂದು ಸುದಿಗೋಷ್ಠಿಯಲ್ಲಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಆಹಾರ ಔಷಧಿ ಗುಣಮಟ್ಟದ ಪರಿಶೀಲನೆ ಬಗ್ಗೆ ನಮ್ಮ ಜವಾಬ್ದಾರಿ ಎಂದು ನಮ್ಮ ಸರ್ಕಾರ ರಚನೆಯಾದ ನಂತರ ಆಹಾರ ಸುರಕ್ಷಿತ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ತುಪ್ಪದ 49 ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು 6 ಮಾದರಿ ವಿಶ್ಲೇಷಣಾ ಕಾರ್ಯ ಪೂರ್ಣವಾಗಿದೆ. ಎಲ್ಲಾ ಮಾದರಿ ಅಸುರಕ್ಷಿತ ಅಂತ ವರದಿ ಬಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.