ಬಾಗಲಕೋಟೆ : ಮುಡಾ ಆರೋಪದಿಂದ ಸಿಎಂ ಸಿದ್ದರಾಮಯ್ಯ ಮುಕ್ತರಾಗಲಿ ಎಂದು ಪೂಜೆ ನಡೆಸಲಾಗಿದೆ. ಹೌದು ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮಾನಿಯಿಂದ ದೀರ್ಘ ದಂಡ ನಮಸ್ಕಾರ ಹಾಕುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬಂದಿರುವ ಎಲ್ಲಾ ಕಂಟಕ ದೂರ ಆಗಲೆಂದು ಅಭಿಮಾನಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಸುಮಾರು 10 ಕಿಲೋಮೀಟರ್ ದೀರ್ಘ ದಂಡ ನಮಸ್ಕಾರ ಹಾಕಿ ಅಭಿಮಾನಿ ಪೂಜಿ ಸಲ್ಲಿಸಲಿದ್ದಾರೆ. ಸಂಗಮ ಕ್ರಾಸ್ ನಿಂದ ಕೂಡಲಸಂಗಮದವರೆಗೆ ದೀರ್ಘ ದಂಡ ನಮಸ್ಕಾರ ಹಾಕಲಿದ್ದಾರೆ. ಸಂಗಮನಾಥ ದೇಗುಲಕ್ಕೆ ಪೂಜೆ ಸಲ್ಲಿಸಲಿದ್ದಾರೆ, ವಿಜಯಪುರದ ಯಾರನಾಳ ಗ್ರಾಮದ ನಿವಾಸಿ ಶ್ರೀಶೈಲ್ ವಾಲಿಕಾರ್ ಅವರು ಈ ಒಂದು ಸೇವೆ ಸಲ್ಲಿಸಿದ್ದಾರೆ. ಮೈಮೇಲೆ ಹಸ್ತದ ಬಟ್ಟೆ ತೊಟ್ಟು ಕಾಂಗ್ರೆಸ್ ಶಾಲು ಧರಿಸಿ ದೀರ್ಘ ದಂಡ ನಮಸ್ಕಾರ ಹಾಕುತ್ತಿದ್ದಾರೆ.