ವಿಜಯನಗರ : ಸದ್ಯ ಈರುಳ್ಳಿ ಹಾಗು ಟೊಮೆಟೊ ದರದಲ್ಲಿ ಭಾರಿ ಕುಸಿತ ಕಂಡಿದ್ದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ರೈತರು ಟೊಮೆಟೊ ಮತ್ತು ಈರುಳ್ಳಿಯನ್ನು ರಸ್ತೆಗೆ ಸುರಿದು ಪ್ರತಿಭಟನೆ ಮಾಡಿದರು.
ಹೌದು ರೈತರು ಟೊಮೆಟೊ ಬೆಳೆದು ಉತ್ತಮ ಬೆಲೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಮಾರುಕಟ್ಟೆಗೆ ಟೊಮೆಟೊ, ಈರುಳ್ಳಿಯನ್ನು ತಂದಿದ್ದರು.ಮಾರುಕಟ್ಟೆಯಲ್ಲಿ 20 ಕೆಜಿ ಟೊಮೆಟೊ ಟ್ರೇ ದರ ರೂ. 20 ಮತ್ತು 30ಕ್ಕೆ ಕುಸಿತಗೊಂಡಿದೆ. ಅಲ್ಲದೇ ಸಂತೆಯಲ್ಲಿ 3 ಕೆಜಿ ಟೊಮೆಟೊ 10 ರೂ.ಗೆ ಮಾರಾಟವಾಗುತ್ತಿದೆ.
ತಾಲೂಕು ಕೇಂದ್ರಗಳಲ್ಲಿ ಟೊಮೆಟೊ ಮತ್ತು ಈರುಳ್ಳಿಯನ್ನು ಖರೀದಿ ಮಾಡಲು ಸರ್ಕಾರ ಮುಂದಾಗಬೇಕು. ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ಅದನ್ನು ಖರೀದಿ ಮಾಡಿ, ರೈತರ ನೆರವಿಗೆ ಧಾವಿಸಬೇಕು ಎಂದು ತಹಶೀಲ್ದಾರ್‌ಗೆ ರೈತರ ನಿಯೋಗ ಮನವಿಯನ್ನು ಸಲ್ಲಿಕೆ ಮಾಡಿದೆ. ಖರೀದಿ ಕೇಂದ್ರದಲ್ಲಿ ಕ್ವಿಂಟಾಲ್‌ಗೆ 4 ಸಾವಿರ ರೂ. ನಂತೆ ದರವನ್ನು ನಿಗದಿ ಮಾಡಬೇಕು ಎಂದು ರೈತರು ಅಗ್ರಹಿಸಿದ್ದಾರೆ.