ಚಿತ್ರದುರ್ಗ : ಚಿತ್ರದುರ್ಗದ ಗೋನೂರು ಬ್ರಿಡ್ಜ್ ಬಳಿ ನೇತ್ರಾವತಿ (27) ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಇದು ಅಪಘಾತವಲ್ಲ ಕೊಲೆ ಎಂಬ ಆರೋಪದ ಮೇಲೆ ಓಬಯ್ಯನ ಹಟ್ಟಿ ಗೊಲ್ಲರಹಟ್ಟಿ ನಿವಾಸಿ ಲೋಕೇಶ್ (30) ಎನ್ನುವ ಆರೋಪಿಯ ಬಂಧನವಾಗಿದೆ.
ಏಪ್ರಿಲ್ 6 ರಂದು ಎಂ ಕೆ ಹಟ್ಟಿ ಗ್ರಾಮದ ನೇತ್ರಾವತಿ ಶವ ಪತ್ತೆಯಾಗಿತ್ತು. ಹಿಟ್ ಅಂಡ್ ರನ್ ಶಂಕಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು. ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೇತ್ರಾವತಿ ಜೊತೆಗೆ ಲೋಕೇಶ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಲೋಕೇಶ್ ವಿರುದ್ಧ ನೇತ್ರಾವತಿ ಸಂಬಂಧಿಕರಿಂದ ಇದೀಗ ಕೊಲೆ ಆರೋಪ ಕೇಳಿ ಬಂದಿದೆ. ಲೋಕೇಶ್ ಬೈಕ್ ನಿಂದ ಕೆಳಗೆ ಬೀಳಿಸಿ ನೇತ್ರಾವತಿಯ ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಇದೀಗ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.