ಬೆಂಗಳೂರು: ರೈಲ್ವೆ ಮಂಡಳಿಯು ರೈಲು ಸಂಖ್ಯೆ 20661/20662 ಕೆಎಸ್ಆರ್ ಬೆಂಗಳೂರು-ಧಾರವಾಡ-ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಹಾವೇರಿಯ ಶ್ರೀ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಎರಡು ನಿಮಿಷಗಳ ನಿಲುಗಡೆಗೆ ಅನುಮೋದನೆ ನೀಡಿದೆ.
ಈ ಹೊಸ ನಿಲುಗಡೆಯು ಏಪ್ರಿಲ್ 11, 2025 ರಿಂದ ರೈಲು ಸಂಖ್ಯೆ 20662 ಧಾರವಾಡ-ಕೆಎಸ್ಆರ್ ಬೆಂಗಳೂರಿಗೆ ಮತ್ತು ಏಪ್ರಿಲ್ 12, 2025 ರಿಂದ ರೈಲು ಸಂಖ್ಯೆ 20661 ಕೆಎಸ್ಆರ್ ಬೆಂಗಳೂರು-ಧಾರವಾಡಕ್ಕೆ ಜಾರಿಗೆ ಬರಲಿದೆ. ಹಾವೇರಿಯಲ್ಲಿ ರೈಲುಗಳ ಆಗಮನ / ನಿರ್ಗಮನ ಸಮಯಗಳು ಈ ಕೆಳಗಿನಂತಿವೆ:
• ಧಾರವಾಡದಿಂದ ಬೆಂಗಳೂರಿಗೆ ತೆರಳುವ 20662 ಸಂಖ್ಯೆಯ ರೈಲು ಎಸ್ಎಂಎಂ ಹಾವೇರಿ ನಿಲ್ದಾಣಕ್ಕೆ ಮಧ್ಯಾಹ್ನ 2:40ಕ್ಕೆ ಆಗಮಿಸಿ, 2:42ಕ್ಕೆ ಹೊರಡಲಿದೆ.
• ಬೆಂಗಳೂರಿನಿಂದ ಧಾರವಾಡಕ್ಕೆ ತೆರಳುವ 20661 ಸಂಖ್ಯೆಯ ರೈಲು ಎಸ್ಎಂಎಂ ಹಾವೇರಿ ನಿಲ್ದಾಣಕ್ಕೆ ಬೆಳಗ್ಗೆ 10:10ಕ್ಕೆ ಆಗಮಿಸಿ, 10:12ಕ್ಕೆ ಹೊರಡಲಿದೆ.
ನಿಟ್ಟೂರಿನಲ್ಲಿ ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್ ಪ್ರೆಸ್’ಗೆ ಒಂದು ನಿಮಿಷ ನಿಲುಗಡೆ
ರೈಲ್ವೆ ಮಂಡಳಿಯು ರೈಲು ಸಂಖ್ಯೆ 16239/16240 ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್ ಪ್ರೆಸ್ ರೈಲುಗಳಿಗೆ ನಿಟ್ಟೂರು ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಒಂದು ನಿಮಿಷದ ನಿಲುಗಡೆಗೆ ಅನುಮೋದನೆ ನೀಡಿದೆ. ಈ ನಿಲುಗಡೆಯು ಏಪ್ರಿಲ್ 10, 2025 ರಿಂದ ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರಿಗೆ ಮತ್ತು ಏಪ್ರಿಲ್ 11, 2025 ರಿಂದ ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರಕ್ಕೆ ಜಾರಿಗೆ ಬರಲಿದೆ. ನಿಟ್ಟೂರಿನಲ್ಲಿ ರೈಲುಗಳ ಆಗಮನ / ನಿರ್ಗಮನ ಸಮಯ ಈ ಕೆಳಗಿನಂತಿರುತ್ತದೆ:
• ಯಶವಂತಪುರದಿಂದ ಚಿಕ್ಕಮಗಳೂರಿಗೆ ತೆರಳುವ 16240 ಸಂಖ್ಯೆಯ ರೈಲು ನಿಟ್ಟೂರು ನಿಲ್ದಾಣಕ್ಕೆ ಸಂಜೆ 4:57ಕ್ಕೆ ಆಗಮಿಸಿ, 4:58ಕ್ಕೆ ಹೊರಡಲಿದೆ.
• ಚಿಕ್ಕಮಗಳೂರಿನಿಂದ ಯಶವಂತಪುರಕ್ಕೆ ತೆರಳುವ 16239 ಸಂಖ್ಯೆಯ ರೈಲ ನಿಟ್ಟೂರು ನಿಲ್ದಾಣಕ್ಕೆ ಬೆಳಗ್ಗೆ 11:22ಕ್ಕೆ ಆಗಮಿಸಿ, 11:23ಕ್ಕೆ ಹೊರಡಲಿದೆ.
ಎಡ ಭುಜದ ಮುರಿತಕ್ಕೆ ಒಳಗಾಗಿದ್ದ 57 ವರ್ಷದ ವ್ಯಕ್ತಿಗೆ ಪೋರ್ಟಿಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
BIG NEWS : ‘ಗೃಹಲಕ್ಷ್ಮಿ’ ಯೋಜನೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ ರಾಜ್ಯ ಸರ್ಕಾರ