ಬೆಂಗಳೂರು : ನಂದಿನಿ ಹಾಲಿನ ಬೆಲೆ, ವಿದ್ಯುತ್ ದರ ಏರಿಕೆ, ಡೀಸೆಲ್ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಇಂದು ಬಿಜೆಪಿ ಜನಾಕ್ರೋಶ ಹೋರಾಟವನ್ನು ಆರಂಭಿಸುತ್ತಿದ್ದು, ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಒಂದು ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ. ಈ ಒಂದು ಹೋರಾಟದ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ ಆಕ್ರೋಶ ಅವರಿಗೆ ಆಗಿರಬೇಕು ಆದರೆ ಜನರಿಗೆ ಆಗಿಲ್ಲ ಎಂದು ಬಿಜೆಪಿ ಹೋರಾಟಕ್ಕೆ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೋರಾಟಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕಿಡಿ ಕಾರಿದ್ದು, ಆಕ್ರೋಶ ಅವರಿಗೆ ಆಗಿರಬೇಕು ಆದರೆ ಜನರಿಗೆ ಆಗಿಲ್ಲ. ಗ್ಯಾರಂಟಿಗಳನ್ನು ಜಾರಿ ಮಾಡಿದ್ದೆ ಬೆಲೆ ಏರಿಕೆ ದೇವರ ಕೆಲಸ ನಮ್ಮ ಕೆಲಸ ಅಂದುಕೊಂಡಿದ್ದೇವೆ. ನಾವು ಇದ್ದೇವೆ ಎಂದು ತೋರಿಸಲು ಹೀಗೆ ಮಾಡುತ್ತಿದ್ದಾರೆ.ಬಿಜೆಪಿ ಜನಾಕ್ರೋಶ ಯಾತ್ರೆಯ ವಿರುದ್ಧ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.