ನವದೆಹಲಿ : ರಾಜ್ಯದಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ವಿರುದ್ಧ ಹನಿಟ್ರ್ಯಾಪ್ ಪ್ರಕರಣ ಭಾರಿ ಸದ್ದು ಮಾಡಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಕಾಂಗ್ರೆಸ್ ಹೈಕಮಾಂಡಿಗೆ ದೂರು ನೀಡಲು ನವದೆಹಲಿಗೆ ತೆರಳಿದ್ದಾರೆ. ಎಲ್ಲಾ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಇದೀಗ ಹೈಕಮಾಂಡ್ಗೆ ದೂರು ನೀಡಲು ಕೆ.ಎನ್ ರಾಜಣ್ಣ ನಿರ್ಧರಿಸದ್ದಾರೆ.
ಹೌದು ಹನಿಟ್ರ್ಯಾಪ್ ಪ್ರಕರಣ ಇನ್ನು ಮುಗಿದಂತೆ ಕಾಣುತ್ತಿಲ್ಲ. ಹೈಕಮಾಂಡ್ಗೆ ಹನಿಟ್ರ್ಯಾಪ್ ಬಗ್ಗೆ ದೂರು ನೀಡಲು ಕೆ.ಎನ್ ರಾಜಣ್ಣ ನಿರ್ಧರಿಸಿದ್ದಾರೆ. ಸಚಿವರೊಂದಿಗೆ ರಾಜಣ್ಣ ಸುದೀರ್ಘವಾಗಿ ಚರ್ಚೆ ನಡೆಸಿದ್ದು, ಈಗ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಲು ಕೆ.ಎನ್ ರಾಜಣ್ಣ ಚಿಂತನೆ ನಡೆಸಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಮಾಹಿತಿ ನೀಡಲು ರಾಜಣ್ಣ ಇದೀಗ ದೆಹಲಿಗೆ ತೆರಳಿದ್ದಾರೆ.
ಮೂರು ದಿನ ದೆಹಲಿಯಲ್ಲಿದ್ದರೂ ಕೂಡ ಹೈಕಮಾಂಡ್ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದೀಗ ಗುಜರಾತ್ ನಲ್ಲಿ ಎಐಸಿಸಿ ಅಧಿವೇಶನ ನಡೆಯುತ್ತಿದ್ದು, ಎಸಿಐಸಿ ಅಧಿವೇಶನಕ್ಕಾಗಿ ಇದೀಗ ಗುಜರಾತ್ ಗೆ ತೆರಳಲ್ಲಿದ್ದಾರೆ. ಅಧಿವೇಶನದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಪ್ರಕರಣದ ಕುರಿತು ಎಲ್ಲ ಬೆಳವಣಿಗೆ ಬಗ್ಗೆ ಹೈಕಮಾಂಡ್ಗೆ ರಾಜಣ್ಣ ಮಾಹಿತಿ ನೀಡಲಿದ್ದಾರೆ.ಈಗಾಗಲೇ ಸಚಿವರೊಂದಿಗೆ ಚರ್ಚಿಸಿ ದೂರು ನೀಡಲು ರಾಜಣ್ಣ ನಿರ್ಧರಿಸಿದ್ದಾರೆ.