ಬಾಗಲಕೋಟೆ : ಒಂದು ಕಡೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಅವರ ಬೆಂಬಲಕ್ಕೆ ಕೂಡಲಸಂಗಮದ ಪೀಠಾಧಿಪತಿ ಬಸವ ಜಯಂತಿಯ ಸ್ವಾಮಿಗಳು ನಿಂತಿದ್ದರೆ.ಇನ್ನೊಂದು ಕಡೆ ಅವರನ್ನು ಬದಲಾವಣೆ ಮಾಡುವ ಕುರಿತು ಶಾಸಕ ವಿಜಯಾನಂದ ಕಾಶಪ್ಪನವರ ಸುಳಿವು ನೀಡಿದ್ದಾರೆ. ಹೌದು ಪಂಚಮಸಾಲಿ ಸಮುದಾಯ ಇವರನ್ನು ಗುರುಗಳನ್ನಾಗಿ ಮಾಡಿದೆ. ಇವರೇನು ಸ್ವಯಂಘೋಷಿತರಾಗಿ ಬಂದಿಲ್ಲ. ಬದಲಾವಣೆ ಕಾಲ ಬಂದಾಗ ಬದಲಾವಣೆ ಆಗುತ್ತದೆ ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ಹಣವನ್ನು ತಾಲ್ಲೂಕಿನಲ್ಲಿ ಮಾತನಾಡಿದ ಅವರು, ಗುರುಗಳು ಸ್ವಯಂಘೋಷಿತವಾಗಿ ಇವರೇ ಬಂದಿಲ್ಲ. ಕಾಲ ಕಾಲಕ್ಕೆ ಏನೇನು ಆಗಬೇಕೋ ಅದೆಲ್ಲಾ ಆಗುತ್ತದೆ. ಬದಲಾವಣೆ ಕಾಲ ಬಂದಾಗ ಯಾರೂ ತಡೆಯುವುದಿಲ್ಲ. ಭೂಮಂಡಲದಲ್ಲೇ ಯಾರನ್ನು ಉಳಿಸಲು ಆಗುವುದಿಲ್ಲ. ಸುನಾಮಿ ಯಾರನ್ನಾದ್ರೂ ಕೇಳಿ ಬರುತ್ತಾ? ಇವರ ಕಾಲ ಮುಗಿದಿದೆ, ಬದಲಾವಣೆ ಆಗಿಯೇ ಆಗುತ್ತದೆ ಎಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಹೇಳಿದರು.