ಹುಬ್ಬಳ್ಳಿ : ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿತವಾದರೂ ಕೂಡ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ವಾಗ್ದಾಳಿ ಮುಂದುವರಿಸಿದ್ದಾರೆ ಎಂದಿಗೂ ಸಿಎಂ ಆಗಲ್ಲ ಆದರೆ ನನ್ನ ಹಣೆಬರದಲ್ಲಿ ಸಿಎಂ ಹುದ್ದೆ ಬರೆದಿದೆ ಎಂದು ಮತ್ತೆ ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿವೈ ವಿಜಯೇಂದ್ರ ಎಂದು ಮುಖ್ಯಮಂತ್ರಿ ಆಗಲ್ಲ ನನ್ನ ಹಣೆಬರಹದಲ್ಲಿ ಸಿಎಂ ಹುದ್ದೆ ಬರದಿದೆ ಎಂದು ಶಾಸಕ ಬಸನಗೌಡ ಪಾಟೀಲ ಹೇಳಿಕೆ ನೀಡಿದರು. ಜಾರ್ಖಂಡ್ ನಲ್ಲಿ ಪಕ್ಷೇತರ ಶಾಸಕ ಸಹ ಮುಖ್ಯಮಂತ್ರಿ ಆಗಿದ್ದ. ಆದರೆ ಬಿವೈ ವಿಜಯೇಂದ್ರ ಎಂದು ಮುಖ್ಯಮಂತ್ರಿ ಆಗಲ್ಲ.
ನಾನು ಬಿಜೆಪಿ ಬಿಟ್ಟು ಹೋಗಿಲ್ಲ ಪೂಜ್ಯ ತಂದೆ ಮತ್ತು ಮಗ ನನ್ನನ್ನು ಹೊರಗೆ ಹಾಕಿದ್ದಾರೆ, ಪೂಜ್ಯ ತಂದೆಯ ಹಿರಿಯ ಮಗ ಇದ್ದಾನೆ. ಅವನು ಸಂತೋಷ ಲಾಡ್ ಗೆ ಸಿಎಂ ಮಾಡಲು ಹೊರಟಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.