ಯಾದಗಿರಿ : ಅಂಗನವಾಡಿ ಸಹಾಯಕಿಯರ ಗೈರು ಹಾಜರಿ ಸರಿಪಡಿಸಲು ಸಿಡಿಪಿಓ ಮಹಿಳಾ ಅಧಿಕಾರಿ ಒಬ್ಬರು 80,000 ಲಂಚ ಸ್ವೀಕರಿಸುವ ವೇಳೆ, ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಸಿಡಿಪಿಒ ವನಜಾಕ್ಷಿ 80 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲಕ್ಕೆ ಬಿದ್ದಿದ್ದಾರೆ. ಅಂಗನವಾಡಿ ಸಹಾಯಕಿರ ಗೈರುಹಾಜರಿ ಸರಿಪಡಿಸಲು ಲಂಚ ಸ್ವೀಕಾರ ಮಾಡುತ್ತಿದ್ದರು. 1 ಲಕ್ಷ ಸಿಡಿಪಿಓ ವಣಜಾಕ್ಷಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಈ ವೇಳೆ 80,000 ಹಣ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.