ಹಾವೇರಿ : ಹಾಲಿನ ದರ ಇಳಿಕೆಯನ್ನು ಖಂಡಿಸಿ ಹಾವೇಮುಲ್ ಮುಂದೆ ರೈತರು ಇದೀಗ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾವೇರಿ ಹಾಲು ಒಕ್ಕೂಟದ ಕಚೇರಿ ಬಾಗಿಲು ಹಾಕಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಚೇರಿಯಲ್ಲಿದ್ದ ಸಿಬ್ಬಂದಿಗಳನ್ನು ಹೊರಹಾಕಿ ಹಾಲು ಉತ್ಪಾದಕರಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರತಿ ಲೀಟರ್ ಹಾಲಿಗೆ 3.50 ಇಳಿಸಿದ ಹಾವೇರಿ ಹಾಲು ಒಕ್ಕೂಟವು ಈ ಒಂದು ಒಕ್ಕೂಟದ ನಿರ್ಧಾರಕ್ಕೆ ಹಾಲು ಉತ್ಪಾದಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದುವರೆ ತಿಂಗಳ ಹಿಂದೆ ಕೂಡ 1.50 ರೂಪಾಯಿಯನ್ನು ಹಾಲು ಒಕ್ಕೂಟ ಇಳಿಕೆ ಮಾಡಿತ್ತು. ನಂದಿನಿ ಹಾಲಿನ ದರ ಏಪ್ರಿಲ್ 1ರಿಂದ ಲೀಟರಿಗೆ 4 ರೂಪಾಯಿ ಹೆಚ್ಚಿಸಿರುವ ಸರ್ಕಾರ, ಹಾವೇರಿ ಹಾಲು ಒಕ್ಕೂಟ ನಷ್ಟದಲ್ಲಿದೆ ಅಂತ ನೆಪ ಹೇಳಿ ಹಾಲಿನ ದರ ಇಳಿಕೆ ಮಾಡಿದ್ದಾರೆ. ಹೀಗಾಗಿ ಹಾಲು ಉತ್ಪಾದಕರು ದರ ಇಳಿಕೆ ಮಾಡಿದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ರೈತರು ಹಾಲು ಒಕ್ಕೂಟದ ಕಚೇರಿ ಬಳಿ ಧರಣಿ ನಡೆಸುತ್ತಿದ್ದಾರೆ.