ಬೆಂಗಳೂರು: ರೈಲು ಸಂಖ್ಯೆ 07323 ಎಸ್ಎಸ್ಎಸ್ ಹುಬ್ಬಳ್ಳಿ-ಬನಾರಸ್ ವಿಶೇಷ ಎಕ್ಸ್ಪ್ರೆಸ್ ಏಪ್ರಿಲ್ (5,12,19,26) ಮೇ (3,10) ರಂದು ಬೆಳಿಗ್ಗೆ 9:00 ಗಂಟೆಗೆ (ಶನಿವಾರ) ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು ಸೋಮವಾರ ಮಧ್ಯಾಹ್ನ 01:15 ಕ್ಕೆ ಉತ್ತರ ಪ್ರದೇಶದ ಬನಾರಸ್ ತಲುಪಲಿದೆ.
ಪುನಃ ರೈಲು ಸಂಖ್ಯೆ 07324 ಬನಾರಸ್-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ಪ್ರೆಸ್ ರೈಲು ಏಪ್ರಿಲ್ (8,15,22,29) ಮೇ (6,13) ರಂದು ಬೆಳಿಗ್ಗೆ 9:00 ಗಂಟೆಗೆ ಬನಾರಸ್ ನಿಂದ ಹೊರಟು ಗುರುವಾರ ಬೆಳಿಗ್ಗೆ 10:00 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯನ್ನು ತಲುಪಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಕಡೂರು, ಅರಸೀಕೆರೆ, ತುಮಕೂರು, ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರಸ್ತೆ, ರಾಯಚೂರು, ಕೃಷ್ಣ, ಬೇಗಂಪೇಟೆ, ಸಿಕಂದರಾಬಾದ್, ಕಾಜಿಪೇಟ್, ಜಮಿಕುಂಟಾ, ರಾಮಗುಂಡಂ, ಮಂಚಿರಿಯಾಲ್, ಬೆಲಂಪಲ್ಲಿ, ಬಲ್ಹಾರ್ಷಾ, ಚಂದ್ರಾಪುರ, ನಾಗ್ಪುರ, ಆಮ್ಲಾ, ಬೆತುಲ್, ಇಟಾರ್ಸಿ, ಜಬಲ್ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್ಪುರ್, ಪ್ರಯಾಗ್ರಾಜ್ ಚಿಯೋಕಿ ಮತ್ತು ಮಿರ್ಜಾಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಬೋಗಿಗಳ ಸಂಯೋಜನೆ: ಈ ರೈಲುಗಳು 2 ಎಸಿ ತ್ರಿ ಟೈರ್, 07 ಸ್ಲೀಪರ್ ಕ್ಲಾಸ್, 9 ಸೆಕೆಂಡ್ ಕ್ಲಾಸ್ 2 ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್ ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ.
II. ಹುಬ್ಬಳ್ಳಿ-ಮುಜಾಫರ್‌ಪುರ – ಹುಬ್ಬಳ್ಳಿ ನಿಲ್ದಾಣಗಳ ನಡುವೆ 08 ಟ್ರಿಪ್ ವಿಶೇಷ ರೈಲು ಸಂಚಾರ
ರೈಲು ಸಂಖ್ಯೆ 07315 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಮುಜಾಫರ್‌ಪುರ ವಿಶೇಷ ಎಕ್ಸ್ಪ್ರೆಸ್ ರೈಲು ಏಪ್ರಿಲ್ (7,14,21,28) ಮೇ (5,12,19,26) ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಸೋಮವಾರ ಸಂಜೆ 5:20ಕ್ಕೆ ಹೊರಟು, ಬುಧವಾರ ಮಧ್ಯಾಹ್ನ 12.30 ಗಂಟೆಗೆ ಮುಜಾಫರ್‌ಪುರ ನಿಲ್ದಾಣವನ್ನು ತಲುಪಲಿದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07316 ಏಪ್ರಿಲ್ (10,17,24) ಮೇ (1,8,15,22,29) ರಂದು ಮುಜಾಫರ್‌ಪುರ ನಿಲ್ದಾಣದಿಂದ ಗುರುವಾರ ಮಧ್ಯಾಹ್ನ 2:15 ಕ್ಕೆ ಹೊರಟು, ಶನಿವಾರ ಬೆಳಿಗ್ಗೆ 10:30 ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್‌ನಗರ, ಕೋಪರ್‌ಗಾಂವ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ನರಸಿಂಗ್‌ಪುರ, ಜಬಲ್‌ಪುರ, ಕಟ್ನಿ, ಸತ್ನಾ, ಮಾಣಿಕ್‌ಪುರ, ಪ್ರಯಾಗ್‌ರಾಜ್ ಛೋಕಿ, ಪಂಡಿತ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್, ಅರಾ, ದಾನಾಪುರ, ಪಾಟ್ಲಿಪುತ್ರ, ಮತ್ತು ಹಾಜಿಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
III. ರೈಲು ಸಂಖ್ಯೆ 06533/06534 ಮೈಸೂರು-ಭಗತ್-ಕಿ-ಕೋತಿ-ಮೈಸೂರು ಬೇಸಿಗೆಯ ಎಕ್ಸ್ಪ್ರೆಸ್ ವಿಶೇಷ (08 ಟ್ರಿಪ್ ಗಳು):
ರೈಲು ಸಂಖ್ಯೆ 06533 ಏಪ್ರಿಲ್ (7,14,21,28) ಮೇ (5,12,19,26) 2025 ಸೋಮವಾರ ರಂದು ರಾತ್ರಿ 9:20 ಕ್ಕೆ ಮೈಸೂರಿನಿಂದ ಹೊರಟು ಬುಧವಾರ ಸಂಜೆ 05:00 ಗಂಟೆಗೆ ಭಗತ್ ಕಿ ಕೋತಿಯನ್ನು ತಲುಪಲಿದೆ.
ರೈಲು ಸಂಖ್ಯೆ 06534 ಏಪ್ರಿಲ್ (11,18,25) ಮೇ (2,9,16,23,30) 2025 ರಂದು (ಶುಕ್ರವಾರ) ರಾತ್ರಿ 10:30 ಗಂಟೆಗೆ ಭಗತ್-ಕಿ-ಕೋಥಿಯಿಂದ ಹೊರಟು ಭಾನುವಾರ ಸಂಜೆ 4:40 ಕ್ಕೆ ಮೈಸೂರು ತಲುಪಲಿದೆ.
ಈ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ದಾವಣಗೆರೆ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಪುಣೆ, ಲೋನಾವಾಲಾ, ಕಲ್ಯಾಣ್, ವಸಾಯಿ ರೋಡ್, ವಾಪಿ, ಉಧ್ನಾ, ವಡೋದರಾ, ಸಬರಮತಿ, ಮಹೇಸಾನಾ, ಪಾಲನ್ಪುರ, ಅಬು ರೋಡ್, ಪಿಂದ್ವಾರಾ, ವೈಭವವಾಡಿ ರೋಡ್, ಫಲ್ನಾ, ರಾಣಿ, ಮಾರ್ವಾರ್, ಪಾಲಿ ಮಾರ್ವಾರ್, ಲುನಿ ಜಂ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲಿನಲ್ಲಿ 16 ಎಸಿ 3-ಟೈರ್ ಬೋಗಿಗಳು ಮತ್ತು 2 ಲಗೇಜ್ / ಜನರೇಟರ್ / ಬ್ರೇಕ್ ವ್ಯಾನ್ ಕೋಚ್ ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತದೆ.
Passengers are requested to visit the Indian Railways website (www.enquiry.indianrail.gov.in), dial 139, or download the NTES app for detailed arrival and departure timings at the respective stations.
ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.in ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.
BIG NEWS: ನಟಿ ರನ್ಯಾ ರಾವ್ ದುಬೈಗೆ 30 ಕೋಟಿ ಹವಾಲಾ ಹಣ ರವಾನೆ, 49.6 ಕೆಜಿ ಚಿನ್ನ ಖರೀದಿ: DRI
BREAKING : ರಾಜ್ಯಸಭೆಯಲ್ಲೂ ಮಹತ್ವದ `ವಕ್ಫ್ ತಿದ್ದುಪಡಿ’ ಮಸೂದೆ ಅಂಗೀಕಾರ | Waqf Amendment Bill 2025