ಮೈಸೂರು: ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಕೆ ಎಸ್ ಆರ್ ಟಿಸಿ ಬಸ್ಸಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಸಿಗೂರಿಗೆ ಸೋದರ ಮಾವ ಸಾವನ್ನಪ್ಪಿದ ಕಾರಣ ಕಾರಿನಲ್ಲಿ ಬೆಂಗಳೂರಿನ ಜೆಪಿ ನಗರದ ಸತ್ಯಾನಂದ ರಾಜೇ ಅರಸ್, ಪತ್ನಿ ನಿಶ್ಚಿತ ಹಾಗೂ ಚಂದ್ರರಾಜೇ ಅರಸ್, ಪತ್ನಿ ಸುವೇದಿನಿ ರಾಣಿ ತೆರಳುತ್ತಿದ್ದರು.
ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇಯಲ್ಲಿ ಎಕ್ಸಿಟ್ ಆಗೋದಕ್ಕೆ ಗೊಂದಲ ಸೃಷ್ಠಿಯಾಗಿದೆ. ಟಾಟಾ ಪೂಂಚ್ ಕಾರು ಕೆಎಸ್ ಆರ್ ಟಿಸಿ ಬಸ್ಸಿಗೆ ಡಿಕ್ಕಿಯಾದ ಪರಿಣಾಮ ಸತ್ಯಾನಂದ ರಾಜೇ ಅರಸ್ ಹಾಗೂ ಪತ್ನಿ ನಿಶ್ಚಿತ ಮತ್ತು ಚಂದ್ರರಾಜೇ ಅರಸ್ ಹಾಗೂ ಪತ್ನಿ ಸುವೇದಿನಿ ರಾಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಎಲೆಕ್ಟ್ರಿಕ್ ಕಾಂಟ್ರಾಕ್ಟರ್ ಆಗಿದ್ದಂತ ಸತ್ಯಾನಂದ ರಾಜೇ ಅರಸ್, ನಿವೃತ್ತ ಜೆಇ ಆಗಿ ಚಂದ್ರರಾಜೇ ಅರಸ್ ಕಾರ್ಯ ನಿರ್ವಹಿಸಿದ್ದರು. ನಾಲ್ವರ ಶವವನ್ನು ಮಂಡ್ಯ ಮೆಡಿಕಲ್ ಕಾಲೇಜಿಲ್ಲಿ ಇರಿಸಲಾಗಿದೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING : ರಾಜ್ಯಸಭೆಯಲ್ಲೂ ಮಹತ್ವದ `ವಕ್ಫ್ ತಿದ್ದುಪಡಿ’ ಮಸೂದೆ ಅಂಗೀಕಾರ | Waqf Amendment Bill 2025
`SSLC, PUC’ ಪಾಸಾದ ಯುವಕ/ಯುವತಿಯರಿಗೆ ಗುಡ್ ನ್ಯೂಸ್ : `PM ಇಂಟರ್ನ್ ಶಿಪ್ ಯೋಜನೆ’ಗೆ ಅರ್ಜಿ ಆಹ್ವಾನ