ಬೆಂಗಳೂರು : ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಉನ್ನತ ಮಟ್ಟದ ಕಂಪೆನಿಗಳಲ್ಲಿ ಇಂಟರ್ನ್ ಶಿಪ್ ನೀಡುವ ಸಲುವಾಗಿ 2024-25 ನೇ ಸಾಲಿನ ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಯೋಜನೆ (Prime Minister’s Internship Scheme in Top Companies) ಘೋಷಣೆ ಮಾಡಲಾಗಿದೆ. ಈ ಯೋಜನೆಯಡಿ ಒಂದು ಕೋಟಿ ಯುವಕ/ಯುವತಿಯರಿಗೆ ಇಂಟರ್ನ್ ಶಿಪ್ ಮೂಲಕ ಕೌಶಲ್ಯವನ್ನು ವೃದ್ಧಿಸಲು ಅವಕಾಶ ಕಲ್ಪಿಸಲಾಗಿದೆ.
ಅಸಕ್ತಿ ಇರುವ ಅಭ್ಯರ್ಥಿಗಳು www.pmintership.mca.gov.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 15 ರೊಳಗಾಗಿ ಅರ್ಹತೆ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು.
ಆಸಕ್ತಿ ಇರುವ ಯುವಕ/ಯುವತಿಯರ ವಯಸ್ಸು 21 ರಿಂದ 24 ಇರಬೇಕು. SSLC, PUC, ITI, B.A, B.Sc, BBA, B.com, BCA, B.Pharmacy ಇತ್ಯಾದಿ ವಿದ್ಯಾರ್ಹತೆ ಪೂರ್ಣಗೊಂಡಿರಬೇಕು.
ಅರ್ಹತೆ:-
1. ಕುಟುಂಬದ ವಾರ್ಷಿಕ ಆಧಾಯವು 2023-24ಕ್ಕೆ 8ಲಕ್ಷ ಮೀತಿಗೆ ಒಳಪಟ್ಟಿರಬೇಕು.
2. ಕುಂಟುಂಬದ ಸದಸ್ಯರಲ್ಲಿ ಯಾವುದೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಲ್ಲದೇ ಸರ್ಕಾರಿ ಸ್ವಾಯಿತ್ಯ ಸಂಸ್ಥೆಗಳಲ್ಲಿ ಖಾಯಂ ನೌಕರರಾಗಿರಬಾರದು.
3. ಇಂಟರ್ಶಿಪ್ ತರಬೇತಿಯು 12 ತಿಂಗಳಿಗೆ ಅವಧಿ ಇರುತ್ತದೆ.
4. ತರಬೇತಿ ಸರಿಯಾಗಿ ಹಾಜರಾದ ಅಭ್ಯರ್ಥಿಗೆ ತರಬೇತಿ ಅವಧಿಯಲ್ಲಿ ಮಾಸಿಕ 5000/- ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಸಂದಾಯಿಸಲಾಗುವುದು.
5. ಇಂಟರ್ಶಿಪ್ಗೆ ಆಯ್ಕೆಯಾದ ಅಭ್ಯರ್ಥಿಗಳು ಕಂಪನಿ ಆಯೋಜಿಸಿದ ಸ್ಥಳದಲ್ಲಿ ಹೋಗಿ ತರಬೇತಿ ಪಡೆಯುವುದು.
6. ಇಂಟರ್ಶಿಪ್ ಪೂರ್ಣಗೊಂಡ ನಂತರ ಅರ್ಹತೆ ಆಧಾರದ ಮೇಲೆ ರೂ.6000/- ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಸಂದಾಯಿಸಲಾಗುವುದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಜಿಲ್ಲೆಯ ಆಸಕ್ತ ನಿರುದ್ಯೋಗಿ ಯುವಕ/ಯುವತಿಯರು ನೋಂದಾಯಿಸಿಕೊಂಡು ಇಂಟರ್ನ್ ಶಿಪ್ ಪ್ರಯೋಜನ ಪಡೆಯಲು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.