ಉತ್ತರಕನ್ನಡ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಆರು ವರ್ಷದ ಬಾಲಕಿಯನ್ನು ತಿಂಡಿ ಕೊಡುವುದಾಗಿ ಪುಸಲಾಯಿಸಿ ಮುಸ್ಲಿಂ ಬಾಲಕನೊಬ್ಬ ಪಾಳುಬಿದ್ದ ದೇವಸ್ಥಾನದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿ ಸಮೀಪದ ಮದನೂರಿನಲ್ಲಿ ನಡೆದಿದೆ.
ಆರೋಪಿ, 17 ವರ್ಷದ ಬಾಲಕ ಯಲ್ಲಾಪುರಕ್ಕೆ ಕುಟುಂಬಸ್ಥರ ಮನೆಗೆ ಬಂದಿದ್ದ ವೇಳೆ ಈ ಬಾಲಕಿಯನ್ನು ಪುಸಲಾಯಿಸಿ ಊರಿನ ಪಾಳು ಬಿದ್ದ ದೇವಸ್ಥಾನಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಛಲವಾದಿ ಸಮುದಾಯಕ್ಕೆ ಸೇರಿದ 1ನೇ ತರಗತಿಯ ವಿದ್ಯಾರ್ಥಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯಾಗಿದ್ದಾಳೆ.
ಅತ್ಯಾಚಾರ ಬಾಲಕ ಹಳಿಯಾಳ ಭಾಗವತಿಯ 17 ವರ್ಷದ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಅಳುತ್ತ ಮನೆಗೆ ಹೋದಾಗ ಪೋಷಕರು ಬಾಲಕಿಯನ್ನು ವಿಚಾರಿಸಿದ್ದಾರೆ.ತಕ್ಷಣ ಆತನನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.