ಕಲಬುರ್ಗಿ : ಡ್ಯಾಂ ವೀಕ್ಷಣೆ ವೇಳೆ ಜಲಾಶಯದ ಹಿನ್ನೀರಿನಲ್ಲಿ ಇಬ್ಬರು ನೀರುಪಾಲಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರ್ ತಾಲೂಕಿನ ಬೆಳಕೋಟ ಗ್ರಾಮದಲ್ಲಿ ನಡೆದಿದೆ. ನೀರುಪಾಲಾದವರನ್ನು ಆಸಿಫ್ ಅಹಮದ್ ಶೇಕ್ (43) ಹಾಗೂ ಮೊಹಮ್ಮದ್ ನಿಜಾಮ್ ಚೋಟುಮಿಯಾ (30) ಎಂದು ತಿಳಿದುಬಂದಿದೆ.
ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬೇಳಕೋಟ ಗ್ರಾಮದಲ್ಲಿ ಈ ಒಂದು ದುರಂತ ಸಂಭವಿಸಿದೆ. ಡ್ಯಾಮ್ ವೀಕ್ಷಣೆಗೆ ಆರು ಜನ ಸ್ನೇಹಿತರೊಂದಿಗೆ ಕಲ್ಬುರ್ಗಿಯಿಂದ ಬೆಳಕೋಟ ಗ್ರಾಮಕ್ಕೆ ಬಂದಿದ್ದರು. ನೀರು ಪಾಲದವರಿಗಾಗಿ ಇದೀಗ ಅಗ್ನಿಶಾಮಕ ದಳ ಹಾಗೂ SDRF ತಂಡದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. ಘಟನೆ ಕುರಿತಂತೆ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.