ಬೆಂಗಳೂರು : ಮನೆಯಲ್ಲಿ ವಿಷಕಾರಿ ವಸ್ತುಗಳು ಆಗಿರಬಹುದು ಅಥವಾ ದ್ರವರೂಪದ ವಸ್ತುಗಳನ್ನು ಮಕ್ಕಳ ಕೈಗೆ ಸಿಗದಂತೆ ಪೋಷಕರು ಎಚ್ಚರಿಕೆ ವಹಿಸಿ ಮಕ್ಕಳ ಕೈಗೆ ಸಿಗದಂತೆ ಇಡಬೇಕು. ಇಲ್ಲವಾದರೆ ಮಕ್ಕಳ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಇದೀಗ ಬೆಂಗಳೂರಿನಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಜ್ಯೂಸ್ ಎಂದು ತಿಳಿದು ಅಲೋವೆರಾ ಡಬ್ಬದಲ್ಲಿದ್ದ ಹರ್ಬಿಸೈಡ್ ಔಷಧಿ ಕುಡಿದು ಬಾಲಕಿಯೋರ್ವಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬ್ಯಾಟರಾಯನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ಜ್ಯೂಸ್ ಎಂದು ತಿಳಿದು ನಿಧಿಕೃಷ್ಣ (14) ಎನ್ನುವ ಬಾಲಕಿ ಸಾವನ್ನಪ್ಪಿದ್ದಾಳೆ. ಆರೋಗ್ಯ ಕಪಡಿಕೊಳ್ಳಲು ನಿಧಿ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಈ ವೇಳೆ ಕುಟುಂಬಸ್ಥರು ಅಲೋವೆರಾ ಜ್ಯೂಸ್ ಖಾಲಿಯಾದ ಡಬ್ಬದಲ್ಲಿ ಔಷಧ ತುಂಬಿಟ್ಟಿದ್ದರು. ಮಾರ್ಚ್ 4 ರಂದು ಜ್ಯೂಸ್ ಎಂದು ಹರ್ಬಿಸೈಡ್ ಔಷದ ಕುಡಿದಿದ್ದಾಳೆ. ಅನಾರೋಗ್ಯ ಹಿನ್ನೆಲೆಯಲ್ಲಿ ತಕ್ಷಣ ನಿಧಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 31ರಂದು ನಿಧಿ ಮೃತಪಟ್ಟಿದ್ದಾಳೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಈ ಒಂದು ಪ್ರಕರಣ ದಾಖಲಾಗಿದೆ.