ಬೆಂಗಳೂರು : ನಿನ್ನೆಯಿಂದಲೇ ರಾಜ್ಯದಲ್ಲಿ ಹಾಲಿನ ದರ ಲೀಟರ್ ಗೆ 4 ರೂ. ಹೆಚ್ಚಳವಾಗಿದ್ದು, ಅಲ್ಲದೇ ಮೊಸರು, ವಿದ್ಯುತ್ ದರ, ಸೇರಿದಂತೆ ಬೆಂಗಳೂರಲ್ಲಿ ಕಸಕ್ಕೂ ಸೆಸ್ ನೀಡಬೇಕಾಗಿದೆ. ಇದೆಲ್ಲದರ ಮಧ್ಯ ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಮಧ್ಯರಾತ್ರಿಯಿಂದ ಡಿಸೈಲ್ ಅನ್ನು ಪ್ರತಿ ಲೀಟರ್ ಗೆ 2 ರೂ.ಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಡೀಸೆಲ್ ಮೇಲೆ ವಿಧಿಸಲಾಗುತ್ತಿರುವ ಮಾರಾಟ ತೆರಿಗೆ ದರವನನು ಶೇಕಡಾ 21.17ಕ್ಕೆ ಏರಿಸಲಾಗಿದೆ. ಹೀಗಾಗಿ ಪ್ರತಿ ಲೀಟರ್ ಮೇಲೆ 2 ರೂಪಾಯಿ ಏರಿಕೆಯಾಗಿದೆ. ಏರಿಕೆ ಬಳಿಕ ಕರ್ನಾಟಕದಲ್ಲ ಡೀಸೆಲ್ ಮಾರಟ ದರ 91.02 ರೂಪಾಯಿ ಆಗಿದೆ. ಪರಿಷ್ಕೃತ ಮಾರಾಟ ದರವೂ ನರೆಯ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇರುತ್ತದೆ ಎಂದು ಸರ್ಕಾರ ತನ್ನ ಅಧಿಸೂಚನೆಯಲ್ಲಿ ಹೇಳಿದೆ.
ಹೌದು ಇಂದಿನಿಂದಲೇ ಕರ್ನಾಟಕದಲ್ಲಿ ಡೀಸೆಲ್ ಬೆಲೆ ಏರಿಕೆ ಮಾಡಿದೆ. ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕರ್ನಾಟಕ ಸರ್ಕಾರ ಹೆಚ್ಚಿಸಿದೆ. ಬಳಿಕ ಇದನ್ನು ಸಮರ್ಥಸಿಕೊಂಡಿದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಡೀಸೆಲ್ ಬೆಲೆ ದುಬಾರಿಯಾಗಿಲ್ಲ ಎಂದಿದೆ.ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿನ ಡೀಸೆಲ್ ಬೆಲೆ ಉಲ್ಲೇಖಿಸಿದೆ. ಬಳಿಕ ಡೀಸೆಲ್ ಮೇಲಿನ ಮಾರಾಟ ತೆರಿಗೆ ದರ ಏರಿಕೆ ಮಾಡಿದರೂ ಕರ್ನಾಟದಲ್ಲಿ ಡೀಸೆಲ್ ಬೆಲೆ ಕಡಿಮೆ ಎಂದಿದೆ.