Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಜಮೈಕಾದಲ್ಲಿ 2025ರ ವಿಶ್ವದ ಅತ್ಯಂತ ಪ್ರಬಲ ಚಂಡಮಾರುತ : ಬೆಚ್ಚಿ ಬೀಳಿಸೋ ವಿಡಿಯೋ ವೈರಲ್ | WATCH VIDEO

28/10/2025 9:27 AM

ALERT : ವಿದ್ಯಾರ್ಥಿಗಳೇ ಎಚ್ಚರ : ದೇಶದ ಈ ’22 ವಿಶ್ವವಿದ್ಯಾಲಯಗಳು ನಕಲಿ’ | Fake Universities

28/10/2025 9:17 AM

BIG NEWS : ಬ್ಯಾಂಕ್ ಗ್ರಾಹಕರೇ ಗಮನಿಸಿ : ನವೆಂಬರ್ 1 ರಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು | Bank Rules

28/10/2025 9:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : 2025-26ನೇ ಸಾಲಿನ ಪೂರ್ಣ ವರ್ಷಕ್ಕಾಗಿ ವೆಚ್ಚ ಮಾಡಲು ರಾಜ್ಯ ಆರ್ಥಿಕ ಇಲಾಖೆ ಅನುಮತಿ | Karnataka Government
KARNATAKA

BREAKING : 2025-26ನೇ ಸಾಲಿನ ಪೂರ್ಣ ವರ್ಷಕ್ಕಾಗಿ ವೆಚ್ಚ ಮಾಡಲು ರಾಜ್ಯ ಆರ್ಥಿಕ ಇಲಾಖೆ ಅನುಮತಿ | Karnataka Government

By kannadanewsnow5701/04/2025 7:45 PM

ಬೆಂಗಳೂರು : ರಾಜ್ಯ ಸರ್ಕಾರವು 2025-26 ನೇ ಸಾಲಿನ ಪೂರ್ಣ ವರ್ಷಕ್ಕಾಗಿ ವೆಚ್ಚ ಮಾಡಲು ಅನುಮತಿ ನೀಡಿ ಆದೇಶ ಪ್ರಕಟಿಸಿದೆ.

01ನೇ ಏಪ್ರಿಲ್ 2025 ರಿಂದ 31ನೇ ಮಾರ್ಚ್ 2026ರ ವರೆಗಿನ ಅವಧಿಯ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ರಾಜ್ಯ ವಿಧಾನ ಮಂಡಲವು ಅನುಮೋದಿಸಿದೆ ಮತ್ತು ದಿನಾಂಕ 26ನೇ ಮಾರ್ಚ್ 2025 ರಂದು ಕರ್ನಾಟಕ ರಾಜ್ಯಪಾಲರ ಒಪ್ಪಿಗೆಯನ್ನು ಪಡೆದ ಈ ಧನವಿನಿಯೋಗ ವಿಧೇಯಕವನ್ನು ದಿನಾಂಕ 26ನೇ ಮಾರ್ಚ್, 2025 ರ ವಿಶೇಷ ಕರ್ನಾಟಕ ರಾಜ್ಯಪತ್ರದಲ್ಲಿ 2025 ರ ಕರ್ನಾಟಕ ಅಧಿನಿಯಮ ಸಂಖ್ಯೆ 21 ಎಂದು ಪ್ರಕಟಿಸಲಾಗಿದೆ. ಈ ಅಧಿಕೃತ ಜ್ಞಾಪನಕ್ಕೆ ಲಗತ್ತಿಸಿದ ಅನುಸೂಚಿಯಲ್ಲಿ ಸೂಚಿಸಿರುವಷ್ಟು ಅನುದಾನ ವಿನಿಯೋಗಗಳನ್ನು ಈ ಅಧಿನಿಯಮವು ಅಧಿಕೃತಗೊಳಿಸುತ್ತದೆ.

2. ಆದ್ದರಿಂದ, ಕಾಲಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ಅನುಸೂಚಿಯಲ್ಲಿನ 5ನೇ ಕಾಲಂನಲ್ಲಿ ಸೂಚಿಸಿದ ಮೊತ್ತಕ್ಕಿಂತ ಮೀರದ ಮೊತ್ತವನ್ನು ದಿನಾಂಕ 1ನೇ ಏಪ್ರಿಲ್ 2025 ರಿಂದ 31ನೇ ಮಾರ್ಚ್ 2026 ರವರೆಗಿನ ಅವಧಿಗೆ, ಅನುಸೂಚಿಯ 2ನೇ ಅಂಕಣದಲ್ಲಿರುವ ಸೇವೆಗಳು ಮತ್ತು ಉದ್ದೇಶಕ್ಕಾಗಿ ಭರಿಸಲು ಇಲಾಖಾ ಮುಖ್ಯಸ್ಥರು ಮತ್ತು ಅಂದಾಜು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅನುಸೂಚಿಯ 5ನೇ ಕಾಲಂನಲ್ಲಿ ತಿಳಿಸಿರುವ ಮೊತ್ತದ ವಿವರಗಳನ್ನು ಆಯವ್ಯಯ ದಸ್ತಾವೇಜುಗಳೊಂದಿಗೆ ಒದಗಿಸಿದ “ಸಂಕ್ಷಿಪ್ತ ಅನುದಾನಗಳ ಅಭಿಯಾಚನೆ ಮತ್ತು ಪ್ರಕೃತ ವಿನಿಯೋಗ 2025-26” ರ ಭಾಗ-I ರಲ್ಲಿ ತಿಳಿಸಲಾಗಿದೆ. ಕೆಲವೊಂದು ಪ್ರಕರಣಗಳಲ್ಲಿ “ಬೇಡಿಕೆ’ಯು ಒಂದಕ್ಕಿಂತ ಹೆಚ್ಚಿನ ಮುಖ್ಯ ಲೆಕ್ಕಶೀರ್ಷಿಕೆ ಮತ್ತು ಮುಖ್ಯ ಲೆಕ್ಕಶೀರ್ಷಿಕೆಯ ಒಂದು ಭಾಗವನ್ನು ಒಳಗೊಂಡಿರುವುದನ್ನು ಗಮನಿಸಬಹುದು, ಯಾವುದೇ ಒಂದು ಮುಖ್ಯ ಲೆಕ್ಕಶೀರ್ಷಿಕೆಯು ಒಂದಕ್ಕಿಂತ ಹೆಚ್ಚಿನ “ಬೇಡಿಕೆಗಳನ್ನು ಒಳಗೊಂಡಿದ್ದಲ್ಲಿ, ಆ ಮುಖ್ಯ ಲೆಕ್ಕಶೀರ್ಷಿಕೆಯ ಬೇಡಿಕೆವಾರು ವಿವರಗಳನ್ನು ಸಂಕ್ಷಿಪ್ತ ಅನುದಾನಗಳ ಅಭಿಯಾಚನೆ ಮತ್ತು ಪ್ರಕೃತ ವಿನಿಯೋಗಗಳು 2025-26 ರ ಭಾಗ- II” ರಲ್ಲಿ ನಮೂದಿಸಲಾಗಿದೆ.

3. ಜಿಲ್ಲಾ ಪಂಜಾಯತಿಗಳಿಗೆ ಸಂಬಂಧಿಸಿದ ಆಯವ್ಯಯ ಅನುದಾನಗಳು ಸಂಬಂಧಪಟ್ಟ ಅನುದಾನ ಅಭಿಯಾಚನೆಗಳಲ್ಲಿ ಸೇರಿರುತ್ತದೆ. ಅಭಿಯಾಚನೆಗಳಲ್ಲಿ ಸೂಚಿಸಿರುವ ಮೊತ್ತಕ್ಕಿಂತ ವೆಚ್ಚವು ಅಧಿಕವಾಗಿಲ್ಲವೆಂದು ಖಾತ್ರಿ ಮಾಡಿಕೊಳ್ಳುವ ಜವಾಬ್ದಾರಿಯು ಇಲಾಖಾ ಮುಖ್ಯಸ್ಥರದ್ದಾಗಿರುತ್ತದೆ. ಇವರು ಜಿಲ್ಲಾ ಪಂಚಾಯತ್‌ನ ಕ್ಷೇತ್ರ ಇಲಾಖೆಯಿಂದ ಮಾಸಿಕ ವರದಿಯನ್ನು ಪಡೆದುಕೊಂಡು ವೆಚ್ಚವನ್ನು ನಿಯಂತ್ರಿಸಬೇಕಾಗಿದೆ.

4. ಎಲ್ಲಾ ಇಲಾಖಾ ಮುಖ್ಯಸ್ಥರು ಮತ್ತು ವೆಚ್ಚವನ್ನು ನಿಯಂತ್ರಿಸಲು ಜವಾಬ್ದಾರರಾಗಿರುವ ಇತರ ಅಧಿಕಾರಿಗಳು ಯಾವುದೇ ಒಂದು ಬೇಡಿಕೆಯಡಿ ರಾಜಸ್ವ ಶೀರ್ಷಿಕೆಯಿಂದ ಬಂಡವಾಳ (ಸಾಲಗಳು ಸೇರಿ) ಶೀರ್ಷಿಕೆಗೆ ಹಾಗೂ ಬಂಡವಾಳ ಶೀರ್ಷಿಕೆಯಿಂದ ರಾಜಸ್ವ ಶೀರ್ಷಿಕೆಗೆ ಹಣವನ್ನು ಮರು ಹೊಂದಾಣಿಕೆ ಮಾಡತಕ್ಕದ್ದಲ್ಲ. ಸರ್ಕಾರ ಮರುಹೊಂದಾಣಿಕೆಗೆ ಮಂಜೂರಾತಿ ನೀಡದ ಹೊರತು ಯಾವುದೇ ಘಟಕದಲ್ಲಿ ಉಳಿತಾಯದಿಂದ ಮರು ಹೊಂದಾಣಿಕೆಯನ್ನು ನಿರೀಕ್ಷಿಸಿ ಅಧಿಕ ವೆಚ್ಚವನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ. ವೆಚ್ಚವನ್ನು ಮಾಡಲು ಜವಾಬ್ದಾರರಾದ ಇಲಾಖಾ ಮುಖ್ಯಸ್ಥರು ಹಾಗೂ ಇತರರು ಆರ್ಥಿಕ ವರ್ಷದ ಕೊನೆಯಲ್ಲಿ ವೆಚ್ಚವು ಬೃಹತ್ ಪ್ರಮಾಣದಲ್ಲಾಗದೇ, ವರ್ಷದ ಎಲ್ಲಾ ತಿಂಗಳಲ್ಲೂ ಸಮನಾಗಿ ಹಂಚುವಂತೆ ನೋಡಿಕೊಳ್ಳತಕ್ಕದ್ದು ಹಾಗೂ ಆಯವ್ಯಯ ವ್ಯಪಗತವಾಗಬಾರದೆಂಬ ಉದ್ದೇಶದಿಂದ ವರ್ಷಾಂತ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ವೆಚ್ಚ ಮಾಡುವುದನ್ನು ತಡೆಯುವುದು. ಹೊಸ ಸೇವೆ ನಿಯಮಗಳ ಆದೇಶ ಸಂಖ್ಯೆ ಎಫ್.ಡಿ 14 ಬಿಪಿಎ 2015, ದಿನಾಂಕ:06-08-2015 ರನ್ವಯ ಯಾವುದೇ “ಹೊಸ ಸೇವೆಗಳ” ಬಗ್ಗೆ ಸಾದಿಲ್ವಾರು ನಿಧಿಯಿಂದ ಅಥವಾ ಪೂರಕ ಅಂದಾಜಿನ ಮೂಲಕ ಆರ್ಥಿಕ ಇಲಾಖೆಯು ಹಣ ಬಿಡುಗಡೆ ಮಾಡದ ಹೊರತು ಯಾವುದೇ ವೆಚ್ಚವನ್ನು ಮಾಡಬಾರದು.

5. ಕರ್ನಾಟಕ ಆರ್ಥಿಕ ಸಂಹಿತೆ / ಸಾದಿಲ್ವಾರು ವೆಚ್ಚದ ಕೈಪಿಡಿ / ಆಯವ್ಯಯ ಕೈಪಿಡಿ ನಿಯಮಗಳ ಅನ್ವಯ ಹಾಗೂ ಆದೇಶ ಸಂಖ್ಯೆ: ಆಇ 08 ಟಿ.ಎಫ್.ಪಿ 2023, ದಿನಾಂಕ:28.10.2024 ರಲ್ಲಿ ಇಲಾಖಾ ಮುಖ್ಯಸ್ಥರಿಗೆ ನೀಡಿರುವ ಅಧಿಕಾರಿ ಪ್ರತ್ಯಾಯೋಜನೆಯನ್ವಯ ಹಾಗೂ ಆರ್ಥಿಕ ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ತ್ರೈಮಾಸಿಕ ಕಂತುಗಳ ಬಿಡುಗಡೆ ಅಧಿಕಾರದ ಆದೇಶಗಳನ್ವಯ ಅನುದಾನದ ಬಿಡುಗಡೆ | ವೆಚ್ಚಗಳನ್ನು ಮಾಡತಕ್ಕದ್ದು.

BREAKING: State Finance Department approves expenditure for the full year 2025-26 | Karnataka Government
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ : ತಾಯಿಗೆ ಬೈದಿದ್ದಕ್ಕೆ ಯುವಕನ ಹತ್ಯೆಗೈದ ಮಗ.!

28/10/2025 8:37 AM1 Min Read
vidhana soudha

ರಾಜ್ಯದ `ಕ್ರಿಶ್ಚಿಯನ್’ ಸಮುದಾಯಕ್ಕೆ ಗುಡ್ ನ್ಯೂಸ್ : ವಿವಿಧ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

28/10/2025 8:14 AM1 Min Read

ALERT : `ಫ್ರಿಡ್ಜ್’ ಪಕ್ಕದಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ : ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು ಎಚ್ಚರ.!

28/10/2025 8:09 AM2 Mins Read
Recent News

SHOCKING : ಜಮೈಕಾದಲ್ಲಿ 2025ರ ವಿಶ್ವದ ಅತ್ಯಂತ ಪ್ರಬಲ ಚಂಡಮಾರುತ : ಬೆಚ್ಚಿ ಬೀಳಿಸೋ ವಿಡಿಯೋ ವೈರಲ್ | WATCH VIDEO

28/10/2025 9:27 AM

ALERT : ವಿದ್ಯಾರ್ಥಿಗಳೇ ಎಚ್ಚರ : ದೇಶದ ಈ ’22 ವಿಶ್ವವಿದ್ಯಾಲಯಗಳು ನಕಲಿ’ | Fake Universities

28/10/2025 9:17 AM

BIG NEWS : ಬ್ಯಾಂಕ್ ಗ್ರಾಹಕರೇ ಗಮನಿಸಿ : ನವೆಂಬರ್ 1 ರಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು | Bank Rules

28/10/2025 9:07 AM

ಪ್ರಾಣಾಪಾಯದಿಂದ ಪಾರಾದ ಶ್ರೇಯಸ್ ಅಯ್ಯರ್ ICU ನಿಂದ ಹೊರಕ್ಕೆ! ‘ಆರೋಗ್ಯ ಇನ್ನೂ ಸೂಕ್ಷ್ಮ’ ಎಂದ ವರದಿ

28/10/2025 8:58 AM
State News
KARNATAKA

BREAKING : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ : ತಾಯಿಗೆ ಬೈದಿದ್ದಕ್ಕೆ ಯುವಕನ ಹತ್ಯೆಗೈದ ಮಗ.!

By kannadanewsnow5728/10/2025 8:37 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಮರ್ಡರ್ ಆಗಿದ್ದು, ತಾಯಿಗೆ ಬೈದಿದ್ದಕ್ಕೆ ಸಂಬಂಧಿ ಯುವಕನನ್ನು ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಉಲ್ಲಾಳ…

vidhana soudha

ರಾಜ್ಯದ `ಕ್ರಿಶ್ಚಿಯನ್’ ಸಮುದಾಯಕ್ಕೆ ಗುಡ್ ನ್ಯೂಸ್ : ವಿವಿಧ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

28/10/2025 8:14 AM

ALERT : `ಫ್ರಿಡ್ಜ್’ ಪಕ್ಕದಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ : ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು ಎಚ್ಚರ.!

28/10/2025 8:09 AM

ರಾಜ್ಯದ ಪೊಲೀಸ್ ಸಿಬ್ಬಂದಿಗಳ `ಸ್ಲೋಚ್ ಕ್ಯಾಪ್’ ಗೆ ಗುಡ್ ಬೈ : ಇಂದು ಹೊಸ `ಪಿ-ಕ್ಯಾಪ್’ ವಿತರಣೆ.!

28/10/2025 7:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.