Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಲಿಸುವ ರೈಲಿನಿಂದ ಬಿದ್ದ ಬಾಲಿವುಡ್ ನಟಿ `ಕರಿಷ್ಮಾ ಶರ್ಮಾ’ : ಆಸ್ಪತ್ರೆಗೆ ದಾಖಲು | Karishma Sharma

12/09/2025 8:56 AM

ಪ್ರಯಾಣಿಕರಿಗೆ ಗುಡ್ ನ್ಯೂಸ್ : `ದಸರಾ ಹಬ್ಬ’ದ ಪ್ರಯುಕ್ತ ವಿಶೇಷ ರೈಲು ಸಂಚಾರ, ಇಲ್ಲಿದೆ ವೇಳಾಪಟ್ಟಿ

12/09/2025 8:46 AM

ಪಹಲ್ಗಾಂ ಆರೋಪಿಗಳ ಪಾಲಿಗ್ರಾಫ್ ಪರೀಕ್ಷೆ: NIA ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ

12/09/2025 8:46 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಧಾನಸಭೆಯಿಂದ ’18 ಸದಸ್ಯ’ರ ಅಮಾನತ್ತು ಆದೇಶ ಹಿಂಪಡೆಯುವಂತೆ ‘ಸ್ಪೀಕರ್’ಗೆ ಆರ್.ಅಶೋಕ್ ಪತ್ರ
KARNATAKA

ವಿಧಾನಸಭೆಯಿಂದ ’18 ಸದಸ್ಯ’ರ ಅಮಾನತ್ತು ಆದೇಶ ಹಿಂಪಡೆಯುವಂತೆ ‘ಸ್ಪೀಕರ್’ಗೆ ಆರ್.ಅಶೋಕ್ ಪತ್ರ

By kannadanewsnow0901/04/2025 5:09 PM

ಬೆಂಗಳೂರು: ಕರ್ನಾಟಕ ವಿಧಾನಸಭೆಯ 18 ಸದಸ್ಯರನ್ನು ಅಮಾನತ್ತು ಮಾಡಿ ಹೊರಡಿಸಿರುವಂತ ಆದೇಶವನ್ನು ಹಿಂಪಡೆಯುವಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಭಾದ್ಯಕ್ಷರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಇಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಪತ್ರ ಬರೆದಿರುವಂತ ಅವರು, ದಿನಾಂಕ: 21.03.2025ರ ಕರ್ನಾಟಕ ವಿಧಾನಸಭೆಯ ಅಧಿವೇಶನದ ಸಮಯದಲ್ಲಿ ಸದನದಲ್ಲಿ ಹನಿಟ್ರ್ಯಾಪ್ ಹಾಗೂ ಮುಸ್ಲಿಮರಿಗೆ 4% ಮೀಸಲಾತಿ ವಿಚಾರದ ಚರ್ಚೆಯು ವಿಕೋಪಕ್ಕೆ ತಿರುಗಿದಾಗ ವಿರೋಧ ಪಕ್ಷದವರಾದ ನಾವೆಲ್ಲ ಸಭಾಧ್ಯಕ್ಷರ ಪೀಠದ ಸುತ್ತ ನಿಂತುಕೊಂಡು ಪ್ರತಿಭಟನೆ ಮಾಡಿರುತ್ತೇವೆ. ಈ ಸಂದರ್ಭದಲ್ಲಿ ತಾವು, ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡಿರುತ್ತೀರೆಂದು, ಅಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿರುತ್ತೀರೆಂದು ವಿಧಾನಸಭೆಯ 18 ಸದಸ್ಯರನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಾಮಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತ್ತುಗೊಳಿಸಲಾಗಿರುತ್ತದೆ ಹಾಗೂ ಅದರ ಜೊತೆಗೆ ಇತರ ನಿರ್ಬಂಧಗಳನ್ನು ವಿಧಿಸಲಾಗಿರುತ್ತದೆ ಎಂದಿದ್ದಾರೆ.

ರಾಜ್ಯದ ವಿಧಾನಮಂಡಲದ ಉಭಯ ಸದನಗಳು ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಳಗಳು, ಈ ಸ್ಥಳಗಳು “ಪ್ರಜಾಪ್ರಭುತ್ವದ ದೇಗುಲಗಳು” ಎಂದು ಕರೆದರೆ ತಪ್ಪೇನೂ ಇಲ್ಲ. ಈ ದೇಗುಲಗಳಲ್ಲಿನ ಮಾನ್ಯ ಸಭಾಧ್ಯಕ್ಷರು ಮತ್ತು ಮಾನ್ಯ ಸಭಾಪತಿಗಳಿಗೆ ಇರುವ ಸ್ನಾನವೂ ಅಷ್ಟೇ ಗೌರವಾನ್ವಿತವಾದುದು. ಈ ವಿಚಾರದಲ್ಲಿ ನನಗೆ ಯಾವ ಭಿನ್ನಾಬಿಪ್ರಾಯವೂ ಇಲ್ಲ ಎಂದಿದ್ದಾರೆ.

ವಿಧಾನಸಭೆಯ 18 ಶಾಸಕರನ್ನು ಅಮಾನತು ಮಾಡಿರುವ ನಿರ್ಣಯ ಅತ್ಯಂತ ಕಠೋರವಾಗಿದ್ದು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹಿಂಪಡೆಯಬೇಕೆಂದು ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ.ಖಾದರ್ ಅವರಿಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದೇನೆ.

ಜನಸಾಮಾನ್ಯರ… pic.twitter.com/Y7KZ2vAiWy

— R. Ashoka (@RAshokaBJP) April 1, 2025

ದಿ.21.03.2025ರಂದು ನಡೆದ ಘಟನ ಉದ್ದೇಶಪೂರ್ವಕವಾದುದು ಅಲ್ಲ ಅಥವಾ ನಿಮ್ಮ ಪೀಠಕ್ಕೆ ಅಗೌರವ ತರುವ ಉದ್ದೇಶವೂ ಯಾವ ಶಾಸಕರಿಗೂ ಇರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ತಾವು ಸದನದ ಕಲಾಪ ನಿರ್ವಹಿಸುವುದನ್ನು ನಾವು ಅತ್ಯಂತ ಹತ್ತಿರದಿಂದ ನೋಡಿದ್ದೇವೆ. ಸಂಸದೀಯ ಚರ್ಚೆಯ ಗುಣಮಟ್ಟ, ಭಾಷೆಯ ಬಳಕೆ ನಿಯಮಗಳ ಪಾಲನೆ ಕಾದಿಗಳೆಲ್ಲವ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಈ ದಿನಗಳಲ್ಲಿ ಯಾರಿಗೇ ಆಗಲೀ ಇದು ಅತ್ಯಂತ ಕಷ್ಟದ ಕೆಲಸ ಎಂಬುದು ಅರ್ಥವಾಗುತ್ತದೆ. ಅದಕ್ಕಾಗಿಯೇ ನಿಮ್ಮ ಬಗ್ಗೆ ನಮಗೆ ಅಪಾರವಾದ ಗೌರವವಿದೆ ಎಂಬುದಾಗಿ ತಿಳಿಸಿದ್ದಾರೆ.

ಒಂದು ವೇಳೆ ತಾವು ಅಂದು ನಮ್ಮ ಎಲ್ಲಾ ಶಾಸಕರನ್ನು ತಮ್ಮ ಕೊಠಡಿಗೆ ಕರೆದು ವಿವರಣೆ ಕೇಳಿದ್ದರೇ ನಾವುಗಳು ಖಂದಿತ ಈ ಘಟನೆಯ ಬಗ್ಗೆ ಸ್ಪಷ್ಟಿಕರಣ ಕೊಡುತ್ತಿದ್ದವು. ಅದಕ್ಕೆ ಅವಕಾಶ ಸಿಗಲಿಲ್ಲ. ಈಗ ಒಂದಿಷ್ಟು ಕಠೋರ ಎನ್ನುವಂಥ ನಿರ್ಧಾರ ತಮ್ಮಿಂದ ಪ್ರಕಟವಾಗಿದೆ. ಇದರಿಂದಾಗಿ ಒಟ್ಟು 18 ಶಾಸಕರು ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವರುಗಳ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದಂತೆ ಆಗಿದೆ. ಈ ನಿರ್ಬಂಧಗಳನ್ನು ಸಡಿಲಿಸಿ ಎಂದಿನಂತೆ ಒಬ್ಬ ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವರುಗಳಿಗೆ ಅವಕಾಶ ಕೊಡಬೇಕೆಂದು ಪತ್ರದಲ್ಲಿ ಕೋರಿದ್ದಾರೆ.

ನಮ್ಮಗಳ ಪ್ರತಿಭಟನೆ ತಮ್ಮ ವಿರುದ್ಧ ಇರಲಿಲ್ಲ ಎಂಬುದನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತೊಮ್ಮೆ ನಮ್ಮ ಗಮನಕ್ಕೆ ತರಲು ಬಯಸುತ್ತೇವೆ. ಈ ಪತ್ರದ ಆರಂಭದಲ್ಲಿ ತಿಳಿಸಿದಂತೆ, ಸದನ ದೊಡ್ಡದು, ಸಭಾಧ್ಯಕ್ಷರು ದೊಡ್ಡವರು ಎಂಬ ಪ್ರಜಾಪ್ರಭುತ್ವದ ಮೂಲಭೂತ ಆಶಯಕ್ಕೆ ಅನುಗುಣವಾಗಿ ಹಾಗೂ ನಾವೆಲ್ಲರೂ ಸೇರಿಕೊಂಡು ಈ ಸಂಸ್ಥೆಯ ಘನತೆ ಹಾಗೂ ಗೌರವವನ್ನು ಉಳಿಸಬೇಕಾಗಿದೆ ಎಂಬ ತತ್ತ್ವದಲ್ಲಿ ನಂಬಿಕೆ ಇರಿಸಿ ಅಮಾನತ್ತು ಮಾಡಿರುವ 18 ಶಾಸಕರ ಆದೇಶವನ್ನು ಮತ್ತೊಮ್ಮೆ ಮರುಪರಿಶೀಲಿಸಿ, ಹಿಂಪಡೆಯುವಂತೆ ಕೋರಿದ್ದಾರೆ.

BREAKING: ‘ನಮ್ಮ ಮೆಟ್ರೋ’ ದರ ಹೆಚ್ಚಳ ಪ್ರಶ್ನಿಸಿ ಸಲ್ಲಿಸಿದ್ದ ‘PIL’ ವಜಾಗೊಳಿಸಿದ ಹೈಕೋರ್ಟ್

‘ಮ್ಯಾನ್ಮಾರ್’ನಲ್ಲಿ ಪ್ರಬಲ ಭೂಕಂಪನ: ದುರಂತದ ‘ಉಪಗ್ರಹ ಚಿತ್ರ’ ಬಿಡುಗಡೆ ಮಾಡಿದ ‘ISRO’ | Myanmar earthquake

Share. Facebook Twitter LinkedIn WhatsApp Email

Related Posts

ಪ್ರಯಾಣಿಕರಿಗೆ ಗುಡ್ ನ್ಯೂಸ್ : `ದಸರಾ ಹಬ್ಬ’ದ ಪ್ರಯುಕ್ತ ವಿಶೇಷ ರೈಲು ಸಂಚಾರ, ಇಲ್ಲಿದೆ ವೇಳಾಪಟ್ಟಿ

12/09/2025 8:46 AM2 Mins Read

SHOCKING : ರಾಜ್ಯದಲ್ಲಿ `ರಾಕ್ಷಸಿ ಕೃತ್ಯ’ : ಭಟ್ಕಳದಲ್ಲಿ ಗೋವುಗಳ ನರಮೇಧ ಶಂಕೆ, ನೂರಾರು ಹಸುಗಳ ಎಲುಬುಗಳು ಪತ್ತೆ.!

12/09/2025 8:39 AM1 Min Read

BREAKING : ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ ಆರೋಪ : ಶಾಸಕ ಯತ್ನಾಳ್ ವಿರುದ್ಧ `FIR’ ದಾಖಲು

12/09/2025 8:25 AM1 Min Read
Recent News

ಚಲಿಸುವ ರೈಲಿನಿಂದ ಬಿದ್ದ ಬಾಲಿವುಡ್ ನಟಿ `ಕರಿಷ್ಮಾ ಶರ್ಮಾ’ : ಆಸ್ಪತ್ರೆಗೆ ದಾಖಲು | Karishma Sharma

12/09/2025 8:56 AM

ಪ್ರಯಾಣಿಕರಿಗೆ ಗುಡ್ ನ್ಯೂಸ್ : `ದಸರಾ ಹಬ್ಬ’ದ ಪ್ರಯುಕ್ತ ವಿಶೇಷ ರೈಲು ಸಂಚಾರ, ಇಲ್ಲಿದೆ ವೇಳಾಪಟ್ಟಿ

12/09/2025 8:46 AM

ಪಹಲ್ಗಾಂ ಆರೋಪಿಗಳ ಪಾಲಿಗ್ರಾಫ್ ಪರೀಕ್ಷೆ: NIA ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ

12/09/2025 8:46 AM

SHOCKING : ರಾಜ್ಯದಲ್ಲಿ `ರಾಕ್ಷಸಿ ಕೃತ್ಯ’ : ಭಟ್ಕಳದಲ್ಲಿ ಗೋವುಗಳ ನರಮೇಧ ಶಂಕೆ, ನೂರಾರು ಹಸುಗಳ ಎಲುಬುಗಳು ಪತ್ತೆ.!

12/09/2025 8:39 AM
State News
KARNATAKA

ಪ್ರಯಾಣಿಕರಿಗೆ ಗುಡ್ ನ್ಯೂಸ್ : `ದಸರಾ ಹಬ್ಬ’ದ ಪ್ರಯುಕ್ತ ವಿಶೇಷ ರೈಲು ಸಂಚಾರ, ಇಲ್ಲಿದೆ ವೇಳಾಪಟ್ಟಿ

By kannadanewsnow5712/09/2025 8:46 AM KARNATAKA 2 Mins Read

ಬೆಂಗಳೂರು : ಪ್ರಮುಖ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಒಂದು…

SHOCKING : ರಾಜ್ಯದಲ್ಲಿ `ರಾಕ್ಷಸಿ ಕೃತ್ಯ’ : ಭಟ್ಕಳದಲ್ಲಿ ಗೋವುಗಳ ನರಮೇಧ ಶಂಕೆ, ನೂರಾರು ಹಸುಗಳ ಎಲುಬುಗಳು ಪತ್ತೆ.!

12/09/2025 8:39 AM

BREAKING : ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ ಆರೋಪ : ಶಾಸಕ ಯತ್ನಾಳ್ ವಿರುದ್ಧ `FIR’ ದಾಖಲು

12/09/2025 8:25 AM
vidhana soudha

ರಾಜ್ಯದಲ್ಲಿ 4 ಅಂತಸ್ತಿನ ಕಟ್ಟಡಗಳಿಗೂ `ಫೈರ್ NOC’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

12/09/2025 8:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.