ಬ್ಯಾಂಕಾಕ್: ಇಂದು ಮ್ಯಾನ್ಮಾರ್ ನಲ್ಲಿ ಭಾರೀ ಭೂಕಂಪನವೇ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದ್ದು, ಇದರಿಂದ 43 ಕಾರ್ಮಿಕರು ನಾಪತ್ತೆಯಾಗಿದ್ದರೇ, ಹಲವೆಡೆ ಗಗನಚುಂಬಿ ಕಟ್ಟಡಗಳು ನೆಲಸಮಗೊಂಡಿದ್ದಾವೆ.
ಇಂದು ಬೆಳಗ್ಗೆ 11.50ರ ಸುಮಾರಿಗೆ ಮ್ಯಾನ್ಮಾರ್ ನಲ್ಲಿ 7.7 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಅಲ್ಲದೇ ಮತ್ತೊಂದು ಬಾರಿ ಮಧ್ಯಾಹ್ನ 12.50ರ ಸುಮಾರಿಗೆ 6.8 ತೀವ್ರತೆಯಲ್ಲಿ ಭೂಕಂಪನ ಉಂಟಾದ ಪರಿಣಾಮ ಹಲವು ಕಟ್ಟಡಗಳು ನೆಲಸಮಗೊಂಡಿದ್ದಾವೆ.
Thai highrise collapses in Mandalay 7.9 quake
This video shows the collapse of a tall building in Thailand. Emergency responders are on site, and local authorities are assessing damage and ensuring public safety.#MyanmarEarthquake #Thailand #PrayForMyanmar pic.twitter.com/5rYFNL3qIc
— Amazing Yunnan (@Amazing_Yunnan) March 28, 2025
ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಮಾಹಿತಿಯಂತೆ ಸಾಗಯಿಂಗ್ ನಗರದ ವಾಯುವ್ಯದ ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಈ ಸದ್ಯಕ್ಕೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಭೂಕಂಪನದ ತೀವ್ರತೆಯಿಂದ ಕಟ್ಟಡಗಳು ಅಲುಗಾಡಿದ್ದರೇ, ಕೆಲವೆಡೆ ಮುಗಿಲೆತ್ತರದ ಕಟ್ಟಡಗಳು ಕ್ಷಣ ಮಾತ್ರದಲ್ಲಿ ನೆಲಕ್ಕೆ ಕುಸಿತಗೊಂಡಿದ್ದಾವೆ. ಈ ಎಲ್ಲಾ ದೃಶ್ಯಗಳು ಈಗ ವೈರಲ್ ಆಗಿದ್ದಾವೆ.
#WATCH A strong #earthquake of magnitude 7.9 jolted in #Myanmar and surrounding areas, with strong tremors felt in #Bangkok.
Severe shaking caused water to gush out of a rooftop swimming pool at a hotel in #Thailand.#MyanmarEarthquake #BangkokEarthquake #ThailandEarthquake pic.twitter.com/P58bpEMfH0
— Bangla Pulse (@pulse_bangla) March 28, 2025