ಚಿಕ್ಕಮಗಳೂರು : ಚಿಕ್ಕಮಂಗಳೂರು ಜಿಲ್ಲೆಯ ಬಾಳೆಹೊನ್ನೂರು ನಲ್ಲಿ ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಸಾವನಪ್ಪಿದ್ದು, ಈ ಒಂದು ಘಟನೆಗೆ ಸಂಬಂಧಿಸಿದಂತೆ ಗ್ರಹಿಣಿಯ ಪತಿಯನ್ನು ಈಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬಾಳೆಹೊನ್ನೂರು ಸಮೀಪ ಹಲಸೂರು ಗ್ರಾಮದ ಗುಬ್ಬುಗೊಡಿಗೆಯಲ್ಲಿ ಮಮತಾ (31) ಮೃತಪಟ್ಟಿದ್ದು ವರದಕ್ಷಿಣೆ ಕಿರುಕುಳ ಆರೋಪದ ಅಡಿ ಪತಿ ಅವಿನಾಶ್‌ನನ್ನು ಬಂಧಿಸಲಾಗಿದೆ. ಮಾವ ನಾರಾಯಣಗೌಡ, ಅತ್ತೆ ಅನಸೂಯ ಹಾಗೂ ನಾದಿನಿ ಅಮಿತ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಮತಾ ಅವರನ್ನು 2020ರ ಮೇ 27ರಂದು ಅವಿನಾಶ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ಸಮಯಲ್ಲಿ 110 ಗ್ರಾಂ ಚಿನ್ನಾಭರಣ ನೀಡಿದ್ದರೂ ಪತಿ, ಅತ್ತೆ ಮತ್ತು ಮಾವ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದರು ಎಂದು ದೂರಲಾಗಿದೆ. ಅವಿನಾಶ್‌ಗೆ 50 ಸಾವಿರ ಮೊತ್ತವನ್ನು ಗೂಗಲ್ ಪೇ ಮೂಲಕ ನೀಡಿದ್ದರೂ ಹಿಂಸೆ ನೀಡುವುದು ನಿಂತಿರಲಿಲ್ಲ ಎನ್ನಲಾಗಿದೆ.