ಮೈಸೂರು : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದೆ. ಇದರ ಬೆನ್ನಲ್ಲೇ ಎಂಎಲ್ಸಿ ಚಲುವಾದಿ ನಾರಾಯಣಸ್ವಾಮಿ ಈಗ ಶಾಸಕ ಯತ್ನಾಳ ಆಯ್ತು ನೆಕ್ಸ್ಟ್ ವಿಕೆಟ್ ಎಸ್‌ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರದ್ದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಟೆಸ್ಟ್ ಆಡೋದನ ಬಿಟ್ಟು ಒನ್ ಡೇ ಶುರು ಮಾಡಿಕೊಂಡಿದೆ. ಮುಂದೆ ಏನಿದ್ರೂ ಟಿ-ಟ್ವೆಂಟಿ ಮ್ಯಾಚ್ ಆಡುತ್ತದೆ ಎಂದು ಮೈಸೂರಿನಲ್ಲಿ ಚಲವಾದಿ ನಾರಾಯಣಸ್ವಾಮಿ ಸ್ಫೋಟಕವಾದ ಹೇಳಿಕೆ ನೀಡಿದರು.
ಇನ್ನು ಹಿಂದೂ ಹುಲಿ ಎಂದು ಕರೆಯುತ್ತಿದ್ದ ಶಾಸಕ ಯತ್ನಾಳ್ ಅವರ ಉಚ್ಚಾಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಹುಲಿ ಅಂದವರನ್ನು ಕಾಡಿಗೆ ಕಳುಹಿಸಿ ಬಿಡುತ್ತಾರೆ. ಬಿಜೆಪಿಯಲ್ಲಿ ಹುಲಿ ಅಂತ ಯಾರು ಇಲ್ಲ. ಅಲ್ಲದೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರವಾಗಿ ನಾವಿದ್ದೇವೆ ಎಂದು ಯಾರು ಹೇಳಬಾರದು ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದರು.