ಬೆಂಗಳೂರು : ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಮಚ್ಚು ಹಿಡಿದು ರಿಲೀಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ದಿನಗಳ ಕಾಲ ಪೊಲೀಸ್ ಸ್ಟಡಿಯಲ್ಲಿದ್ದಂತಹ ಬಿಗ್ ಬಾಸ್ ಮಾಜಿ ಸ್ಪರ್ಧೆಗಳಾದ ರಜತ್ ಮತ್ತು ವಿನಯ್ ಗೌಡ ಅವರ ಪೊಲೀಸ್ ಕಸ್ಟಡಿ ಎಂದು ಅಂತ್ಯವಾಗಿದೆ.
ಹೌದು ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್, ವಿನಯ್ ಗೌಡ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯವಾಗಿದ್ದು, ಸಂಜೆ 4 ಗಂಟೆಗೆ ಮತ್ತೆ ಕೋರ್ಟಿಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಹಾಜರುಪಡಿಸಲಿದ್ದಾರೆ. ಬೆಂಗಳೂರಿನ 24ನೇ ಎಸಿಜೆಎಂ ಕೋರ್ಟಿಗೆ ಪೊಲೀಸರು ಹಾಜರುಪಡಿಸಲಿದ್ದಾರೆ. ಕಳೆದ 3 ದಿನದಿಂದ ಬಸವೇಶ್ವರನಗರ ಪೊಲೀಸರ ಕಸ್ಟಡಿಯಲ್ಲಿ ರಜತ್ ಮತ್ತು ವಿನಯ್ ಗೌಡ ಇದ್ದರು.