ಬಳ್ಳಾರಿ : ಮೂವರು ಬಾಲಕರು ಕಾಲುವೆಯಲ್ಲಿ ಸ್ನಾನಕ್ಕೆಂದುತೆರಳಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಓರ್ವ ಬಾಲಕ ಕೊಚ್ಚಿ ಹೋಗಿದ್ದು ಇಬ್ಬರು ಬಾಲಕರನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಶ್ರೀನಿವಾಸ ಕ್ಯಾಂಪ್ ನಲ್ಲಿ ನಡೆದಿದೆ.
ಹೌದು ಕಾಲುವೆಯಲ್ಲಿ ಸ್ನಾನಕ್ಕೆ ಎಂದು ತೆರಳಿದ್ದ ಬಾಲಕರಾದ ವಿಕ್ರಂ, ಶಂಭುಲಿಂಗ, ಮತ್ತು ದೀಪು ಕಾಲುವೆಗೆ ಇಳಿದಿದ್ದಾರೆ. ಮೂವರು ಬಾಲಕರು ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾರೆ. ನೀರಿನ ರಭಸಕ್ಕೆ ಕಾಲುವೆಯಲ್ಲಿ 14 ವರ್ಷದ ವಿಕ್ರಂ ಕೊಚ್ಚಿ ಹೋಗಿದ್ದಾನೆ.
ಶಂಭುಲಿಂಗ ಮತ್ತು ದೀಪು ಇಬ್ಬರನ್ನು ಸ್ಥಳೀಯರು ಕೂಡಲೇ ರಕ್ಷಣೆ ಮಾಡಿದ್ದಾರೆ.ಇನ್ನು ವಿಕ್ರಮಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.