ಬೆಂಗಳೂರು: ರಾಜ್ಯದ ಜನರಿಗೆ ನಂದಿನಿ ಹಾಲಿನ ದರದ ಏರಿಕೆಯ ನಂತ್ರ, ಸರ್ಕಾರ ಕರೆಂಟ್ ಶಾಕ್ ನೀಡಿದೆ. ಪ್ರತಿ ಯೂನಿಟ್ ವಿದ್ಯುತ್ ದರವನ್ನು 36 ಪೈಸೆ ಹೆಚ್ಚಿಸಿ ಕೆಇಆರ್ ಸಿ ಆದೇಶಿಸಿದೆ.
ಇಂದು ಇಂಧನ ಸಚಿವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ ಸಂಬಂಧ ಮಹತ್ವದ ಸಭೆ ನಡೆಯಿತು. ಮೂರು ವರ್ಷಗಳ ಬಳಿಕ ವಿದ್ಯುತ್ ದರ ಏರಿಕೆ ಮಾಡುವಂತ ಸರ್ಕಾರಕ್ಕೆ ಎಸ್ಕಾಂಗಳು ಸಲ್ಲಿಸಿದ್ದಂತ ಪ್ರಸ್ತಾವನೆ ಕುರಿತು ಚರ್ಚಿಸಲಾಯಿತು.
ಇಂದಿನ ಸಭೆಯಲ್ಲಿ ಕರ್ನಾಟಕದಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರವನ್ನು 36 ಪೈಸೆ ಹೆಚ್ಚಳ ಮಾಡುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ವಿದ್ಯುತ್ ದರವನ್ನು 36 ಪೈಸೆ ಹೆಚ್ಚಳ ಮಾಡಿ ಕೆ ಇ ಆರ್ ಸಿ ಆದೇಶಿಸಿದೆ. ಈ ಮೂಲಕ ರಾಜ್ಯದ ಜನತೆಗೆ ನಂದಿನಿ ಹಾಲಿನ ದರದ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯ ಶಾಕ್ ನೀಡಲಾಗಿದೆ.
GOOD NEWS : ಶೀಘ್ರದಲ್ಲಿ ರೈತರ ಹಾಲಿನ ಬಾಕಿ ಪ್ರೋತ್ಸಾಹ ಧನ ಬಿಡುಗಡೆ : ಸಚಿವ ಕೆ.ಎನ್ ರಾಜಣ್ಣ ಹೇಳಿಕೆ
BREAKING NEWS: ಏಪ್ರಿಲ್.2ರಂದು 384 KAS ಹುದ್ದೆಗಳ ನೇಮಕಾತಿಗೆ ‘ಮುಖ್ಯ ಪರೀಕ್ಷೆ’: KPSC ಮಾಹಿತಿ | KAS Main Exam