ನವದೆಹಲಿ : ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಾಘೇಲ್ ಅವರ ನಿವಾಸದ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಏಜೆನ್ಸಿ ತಂಡಗಳು ರಾಯ್‌ಪುರ ಮತ್ತು ಭಿಲಾಯಿಯಲ್ಲಿರುವ ಬಾಘೇಲ್ ಅವರ ನಿವಾಸದ ಮೇಲೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಮಾಜಿ ಮುಖ್ಯಮಂತ್ರಿಯ ಆಪ್ತ ಸಹಾಯಕರ ಮನೆಯ ಮೇಲೂ ದಾಳಿ ನಡೆಸಿವೆ.
ಸಿಬಿಐ ಅಧಿಕಾರಿಗಳು ಅವರ ಆಪ್ತರಾದ ವಿನೋದ್ ವರ್ಮಾ ಮತ್ತು ದೇವೇಂದ್ರ ಯಾದವ್ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದು, ಸಿಬಿಐ ಅಧಿಕಾರಿಗಳು ಅವರ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.