ಕೋಲಾರ : ವಾಯು ವಿಹಾರಕ್ಕೆ ತೆರಳಿದ್ದ ಇಬ್ಬರು ನಿವೃತ್ತ ಉಪನ್ಯಾಸಕರಿಗೆ ಬೈಕ್ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಜೂನಿಯರ್ ಕಾಲೇಜು ಸಮೀಪ ಈ ಘಟನೆ ನಡೆದಿದೆ.
ಮೃತ ಉಪನ್ಯಾಸಕರನ್ನು ನಿವೃತ್ತ ಕನ್ನಡ ಉಪನ್ಯಾಸಕ ಕೆ.ಬಿ.ಮೋಹನ್ ( 64), ಮತ್ತೋಬ್ಬ ನಿವೃತ್ತ ರಾಸಾಯನ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀ ನಾರಾಯಣ (62) ಎಂದು ತಿಳಿದುಬಂದಿದೆ. ಪಟ್ಟಣದ ಜೂನಿಯರ್ ಕಾಲೇಜು ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ವಾಯು ವಿಹಾರ ಮುಗಿಸ ವಾಪಸ್ ಆಗುತ್ತಿದ್ದ ವೇಳೆ ಅತಿವೇಗವಾಗಿ ಹಾಗೂ ಅಜಾಕರಕತೆಯಿಂದ ಬಂದ RX100 ಬೈಕ್ ಹಿಂಬದಿಯಿಂದ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಇಬ್ಬರಿಗೂ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಯಾಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಲಕ್ಷ್ಮೀ ನಾರಾಯಣ ಅವರನ್ನು ಕೋಲಾರದ ಗೌರವ್ ಆಸ್ಪತ್ರೆಗೆ ಹಾಗೂ ಮೋಹನ್ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ನಿವೃತ್ತ ಉಪನ್ಯಾಸಕರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೂ ಬೈಕ್ ಪೊಲೀಸ ವಶಕ್ಕೆ ಪಡೆದಿದ್ದು, ಬೈಕ್ ನಲ್ಕಿದ್ದ ಮೂರು ಜನ ಸವಾರರು ಪರಾರಿಯಾಗಿದ್ದಾರೆ, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.