ದಾವಣಗೆರೆ : ಗ್ರಂಥಾಲಯ ಸಿಬ್ಬಂದಿ ಅಮಾನತು ಆದೇಶ ರದ್ದುಪಡಿಸಲು ಆತನಿಂದಲೇ 50,000 ರೂ ಲಂಚ ಸ್ವೀಕರಿಸುತ್ತಿದ್ದಾಗ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಪಂಚಾಯತಿ ಇಒ ವಾಹನ ಚಾಲಕ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಶ್ಯಾಮ್ ಕುಮಾರ್ ತಾಲೂಕ ಪಂಚಾಯಿತಿ ಇಒ ಉತ್ತಮ ಅವರ ವಾಹನ ಚಾಲಕನಾಗಿದ್ದು, ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ವಾಹನ ಚಾಲಕ ಬಲೆಗೆ ಬಿದ್ದಿದ್ದಾನೆ. ಗ್ರಂಥಾಲಯ ಇಲಾಖೆ ಸಿಬ್ಬಂದಿ ಶಫಿಉಲ್ಲ ಬಳಿ ಲಂಚ ಸ್ವೀಕರಿಸುತ್ತಿದ್ದ.
ಬೆಳ್ಳಿಗನೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯ ಸಿಬ್ಬಂದಿ ಶಫಿಉಲ್ಲಾ ಅಮಾನತು ಆದೇಶ ರದ್ದುಪಡಿಸಲು ಆತನಿಂದ 50,000 ಲಂಚ ಸ್ವೀಕರಿಸುತ್ತಿದ್ದ ಎನ್ನಲಾಗಿದೆ.ಶಫಿಉಲ್ಲಾ ಅಮಾನತು ಆದೇಶ ರದ್ದು ಪಡಿಸುವುದಾಗಿ ನಂಬಿಸಿದ್ದ ಶ್ಯಾಮ್ ಶಫೀಉಲ್ಲಾನಿಂದ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಶಾಮಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಚನ್ನಗಿರಿ ತಾಲೂಕು ಪಂಚಾಯತ್ ಇಒ, ಉತ್ತಮ ಕೂಡ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.