ಬೆಂಗಳೂರು : ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ಎಂ ರೇವಣ್ಣ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಕಾರ್ಯಕರ್ತೆ ನಂದಿನಿ ನಾಗರಾಜು ಅವರನ್ನು ಇದೀಗ ಪಕ್ಷದಿಂದ ಅಮಾನತು ಮಾಡಲಾಗಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಹಣಕಾಸು ಸೇವೆಗಳ ಕ್ಷೇತ್ರದ ಮುಖ್ಯಸ್ಥರು ಆಗಿರುವಂತ ಟಿ.ಸುರೇಶ್ ಪಕ್ಷದಿಂದ ಅಮಾನತುಗೊಳಿಸಿ ಅದೇಶಿಸಿದ್ದಾರೆ. ಅಲ್ಲದೆ ಹೆಚ್ ಎಂ ರೇವಣ್ಣ ಅವರ ವಿರುದ್ಧ ಆರೋಪ ಮಾಡಿರುವುದರ ಕುರಿತು ಸ್ಪಷ್ಟ ವಿವರ ನೀಡುವವರಿಗೇ ಅಮಾನತು ಮಾಡಲಾಗಿದ್ದು, ಈ ಕುರಿತು ನಂದಿನಿ ನಾಗರಾಜ್ ಅವರಿಗೆ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದು ನೋಟಿಸ್ ನಲ್ಲಿ ಉಲ್ಲೆಖಿಸಿದ್ದಾರೆ.
ಕೈ ಕಾರ್ಯಕರ್ತೆಯ ಆರೋಪವೇನು?
ಗ್ಯಾರಂಟಿ ಅನುಷ್ಠಾನ ಯೋಜನೆಗಳ ಅಧ್ಯಕ್ಷರಾದಂತಹ ರವಿಚಂದ್ರನ್ ಅವರು ಕಾಂಗ್ರೆಸ್ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಾರ್ಚ್ 17 ರಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ನಂದಿನಿ ನಾಗರಾಜ್ ಕೆಕೆ ಗೆಸ್ಟ್ ಹೌಸ್ ನಲ್ಲಿ ಇರುವಾಗ ಈ ಘಟನೆ ಆಗಿದೆ. ಇನ್ನು ಈ ಸಂಬಂಧ ನಂದಿನಿ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಮಹಿಳಾ ಆಯೋಗಕ್ಕೂ ಮೊರೆ ಹೋಗಿದ್ದಾರೆ.
ಈ ಹಿಂದೆ ಟೆಂಡರ್ ವಿಚಾರಕ್ಕೆ ಹೆಚ್.ಎಂ.ರೇವಣ್ಣ ಮತ್ತು ಮಹಿಳೆ ಮಧ್ಯೆ ಸ್ವಲ್ಪ ಟಾಕ್ ವಾರ್ ಆಗಿತ್ತಂತೆ. ಇದೇ ವಿಚಾರವಾಗಿ ಕೆಕೆ ಗೆಸ್ಟ್ ಕ್ಯಾಂಟಿನ್ ನಲ್ಲಿ ಕೂತಿದ್ದ ಮಹಿಳೆ ಬಗ್ಗೆ ರೇವಣ್ಣ ನಿಂದನೆ ಮಾತಾಡಿದ್ದಾರಂತೆ.. ಈ ಬಗ್ಗೆ ಪ್ರಶ್ನೆ ಮಾಡಲು ಹೋದಾಗ ತನ್ನ ಬೆರಳು ಮುರಿದು ಹಲ್ಲೆ ನಡೆಸಿದ್ದಲ್ಲದೇ ನನ್ನ ಕುರಿತು ಜಾತಿ ನಿಂದನೆ ಮಾಡಿದ್ದಾರೆ ಎಂದು ಕೆಲವು ಮೊಬೈಲ್ ವಿಡಿಯೋ ಜೊತೆ ಹೈಗ್ರೌಂಡ್ಸ್ ಠಾಣೆಗೆ ನಂದಿನಿ ನಾಗರಾಜ್ ದೂರು ನೀಡಿದ್ದಾರೆ. ಸದ್ಯ ದೂರು ಸ್ವೀಕರಿಸಿರೋ ಹೈಗ್ರೌಂಡ್ಸ್ ಪೊಲೀಸರು ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿ ನೀಡುವಂತೆ ಸೂಚಿಸಿದ್ದಾರೆ.
ಮಹಿಳಾ ಆಯೋಗಕ್ಕೂ ದೂರು
ಇನ್ನು ಪೊಲೀಸರು ಸರಿಯಾಗಿ ಕ್ರಮ ತೆಗೆದುಕೊಳುತ್ತಿಲ್ಲ ಎಂದು ಹೆಚ್.ಎಂ.ರೇವಣ್ಣ ವಿರುದ್ಧ ನಂದಿನಿ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ನಂದಿನಿ ದೂರು ಸ್ವೀಕರಿಸಿದ ಮಾತಾಡಿದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಕಾಂಗ್ರೆಸ್ ಕಾರ್ಯಕರ್ತೆ ಮೇಲೆ H.M.ರೇವಣ್ಣರಿಂದ ಹಲ್ಲೆ ಆರೋಪ ಸಂಬಂಧ ನಂದಿನಿ ಎಂಬುವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಡಿಸಿಪಿಗೆ ಪತ್ರ ಬರೆದು ದೂರಿನ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಹೇಳುತ್ತೇವೆ ಎಂದು ತಿಳಿಸಿದರು.