ಬೆಂಗಳೂರು: ನಗರದಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣದ ಖಚಿತವಾಗಿದೆ. ಈಗಾಗಲೇ ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದೀಗ ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮೂರು ಸ್ಥಳಗಳನ್ನು ಕೂಡ ಫೈನಲ್ ಮಾಡಿರುವುದಾಗಿ ತಿಳಿದು ಬಂದಿದೆ.
ಹೌದು ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಮೂರು ಸ್ಥಳಗಳನ್ನು ಗುರುತಿಸಿ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಐದಾರೂ ಸ್ಥಳಗಳ ಬಗ್ಗೆ ಚರ್ಚೆ ನಡೆಸಲಾದ್ರೂ, ಐಡೆಕ್ ಸಂಸ್ಥೆ ನೀಡಿರುವಂತ ವರದಿಗೆ ಅನುಗುಣವಾಗಿ ಮೂರು ಸ್ಥಳಗಳನ್ನು ಫೈನಲ್ ಮಾಡಿ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಕಳಿಸಿದೆ ಎನ್ನಲಾಗುತ್ತಿದೆ.
ಅಂದಹಾಗೇ ಐಡೆಕ್ ಸಂಸ್ಥೆಯು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಎಲ್ಲಾ ಮಾನದಂಡಗಳನ್ನು ಅನುಸರಿಸಿ ಕನಕಪುರದ ಬಳಿಯಲ್ಲಿ ಎರಡು ಸ್ಥಳ ಹಾಗೂ ನೆಲಮಂಗಲದ ಕುಣಿಗಲ್ ನಡುವಿನ ಸೋಲು ಬಳಿಯಲ್ಲಿ ಮತ್ತೊಂದು ಸ್ಥಳ ಸೇರಿದಂತೆ ಮೂರು ಸ್ಥಳಗಳನ್ನು ಶಾರ್ಟ್ ಲೀಸ್ಟ್ ಮಾಡಿತ್ತು. ಈ ಸ್ಥಳಗಳನ್ನೇ ರಾಜ್ಯ ಸರ್ಕಾರ ಫೈನಲ್ ಮಾಡಿ, ಕೇಂದ್ರ ಸರ್ಕಾರಕ್ಕೆ ಒಂದು ಸ್ಥಳಗಳ ಆಯ್ಕೆಗಾಗಿ ಅನುಮತಿಗಾಗಿ ಕಳುಹಿಸಿಕೊಡಲಾಗಿದೆ.
ರಾಜ್ಯ ಸರ್ಕಾರದಿಂದ ಕನಕಪುರದ ಬಳಿಯಲ್ಲಿ ಎರಡು ಸ್ಥಳ, ನೆಲಮಂಗಲದ ಕುಣಿಗಲ್ ಬಳಿಯಲ್ಲಿ ಒಂದು ಸ್ಥಳಗಳಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಳುಹಿಸಿದಂತ ಪ್ರಸ್ತಾವನೆಯಲ್ಲಿ ಯಾವ ಸ್ಥಳವನ್ನು ಫೈನಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.