ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಅಪರೂಪದ ಪ್ರಕರಣ ನಡೆದಿದ್ದು, ಮಳೆ ಹಾನಿ ಪರಿಹಾರ ನೀಡದ್ದಕ್ಕೆ ಪಟ್ಟಣ ಪಂಚಾಯಿತಿಯನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಜೆಎಂಎಫ್ ಸಿ ಕೋರ್ಟ್ ಈ ಕುರಿತು ಆದೇಶ ಹೊರಡಿಸಿದೆ.
2014ರಲ್ಲಿ ಮಳೆಯಿಂದ ಶ್ರೀಧರ ನಾಯಕ್ ಮನೆಗೆ ನೀರು ನುಗ್ಗಿತ್ತು. ಶ್ರೀಧರ ನಾಯಕ ಮನೆಗೆ ಒಳಚರಂಡಿ ನೀರು ನುಗ್ಗಿ ಹಾನಿ ಆಗಿತ್ತು. ಮಳೆ ಹಾನಿ ಈ ವೇಳೆ ಶ್ರೀಧರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಪರಿಹಾರ ಅರ್ಜಿಯನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿರಸ್ಕರಿಸಿದ್ದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಶ್ರೀಧರ ನಾಯ್ಕಗೆ 80,000 ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿತ್ತು. ಕೋರ್ಟ್ ಆದೇಶಿಸಿ 10 ತಿಂಗಳು ಕಳೆದರೂ ಕೂಡ ಪರಿಹಾರ ನೀಡಿಲ್ಲ. ಹಾಗಾಗಿ ಕೋರ್ಟ್ ಆದೇಶ ಉಲ್ಲಂಘನೆಯಾದ ಹಿನ್ನೆಲೆ ಪಟ್ಟಣ ಪಂಚಾಯತಿ ಕಚೇರಿ ಜಪ್ತಿಗೆ ಆದೇಶಿಸಿದೇ. ನ್ಯಾಯಾಲಯದ ಸಿಬ್ಬಂದಿಯಿಂದ ಹೊನ್ನಾವರ ಪಟ್ಟಣ ಪಂಚಾಯಿತಿ ಕಚೇರಿ ಇದೀಗ ಜಪ್ತಿ ಮಾಡಿಕೊಳ್ಳಲಾಗಿದೆ.