ಬೆಂಗಳೂರು: ಮಾರ್ಚ್.22ರಂದು ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟವನ್ನು ಖಂಡಿಸಿ ಅಖಂಡ ಕರ್ನಾಟಕ ಬಂದ್ ನಡೆಸಲಾಗುತ್ತಿದೆ. ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ರಾಜ್ಯಾಧ್ಯಂತ ಬಂದ್ ಇರಲಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಅವರು ಮಾರ್ಚ್.22ರಂದು ಕನ್ನಡಿಗರಿಗಾಗಿ ಬಂದ್. ಇದು ಕರ್ನಾಟಕದ ಜನತೆಗಾಗಿ ಬಂದ್. ಮಾರ್ಚ್.22ರಂದು ಎಲ್ಲರೂ ಕರ್ನಾಟಕ ಬಂದ್ ಗೆ ಬೆಂಬಲಿಸುವಂತೆ ಕೋರಿದರು.
ಮಾರ್ಚ್.22ರಂದು ಬೆಂಗಳೂರಿನ ಟೌನ್ ಹಾಲ್ ನಿಂದ ಬೃಹತ್ ಮೆರವಣಿಗೆಯ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಮಾರ್ಚ್.22ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ರಾಜ್ಯಾಧ್ಯಂತ ಎಲ್ಲವೂ ಬಂದ್ ಆಗಲಿದ್ದಾವೆ. ಕನ್ನಡಿಗರಿಗೆ ಅನ್ಯಾಯ ಖಂಡಿಸಿ ಈ ಬಂದ್ ನಡೆಸಲಾಗುತ್ತಿದೆ ಎಂದರು.
ಎಂಇಎಸ್ ನಿಷೇಧ ಮಾಡಬೇಕು. ಕನ್ನಡಿಗರ ಮೇಲಿನ ಅನ್ಯಾಯಕ್ಕೆ ತಕ್ಕ ಪಾಠವನ್ನು ಮರಾಠಿಗರಿಗೆ ಕಲಿಸುವಂತ ಕೆಲಸವನ್ನು ಸರ್ಕಾರ ಮಾಡಬೇಕು. ಹೀಗಾಗಿ ವಾಹನ ಚಾಲಕರು, ಮಾಲೀಕರು, ರಾಜ್ಯದ ಜನರು ಮಾರ್ಚ್.22ರ ಅಖಂಡ ಕರ್ನಾಟಕ ಬಂದ್ ಗೆ ಬೆಂಬಲಿಸಬೇಕು ಎಂಬುದಾಗಿ ತಿಳಿಸಿದರು.