ಬೆಂಗಳೂರು : ಕೋಲಾರ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕುಗಳಲ್ಲಿ ಕೆಐಡಿಬಿ ಪ್ರದೇಶಕ್ಕೆ ವಶಪಡಿಸಿಕೊಳ್ಳಲಾದ ಜಮೀನಿನ ಭೂ ಮಾಲೀಕರು ಯಾರು ಪ್ರೋತ್ಸಹ ಧನ (Incentives) ಪಡೆದಿರುತ್ತಾರೋ ಅವರುಗಳಿಗೆ ಉದ್ಯೋಗ ಒದಗಿಸುವುದಾಗಿ ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದರು.
ಇಂದು ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಎಂ.ಎಲ್.ಅನಿಲ್‍ಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿಯಂತೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಮತ್ತು ಕೆ.ಜಿ.ಎಫ್ ತಾಲೂಕುಗಳಲ್ಲಿ ಬಿಜಿಎಂಎಲ್ ವ್ಯಾಪ್ತಿಯಲ್ಲಿ 12,335.51 ಎಕರೆ ಹಾಗೂ ಬಿಇಎಂಎಲ್ ವ್ಯಾಪ್ತಿಯಲ್ಲಿ 1846 ಎಕರೆ ಜಮೀನಿರುತ್ತದೆ. ಬಿಜಿಎಂಎಲ್ ಹಾಗೂ ಬಿಇಎಂಎಲ್ ಸಂಸ್ಥೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ತಿಳಿಸಿದರು.
ಬಿಇಎಂಎಲ್ ಗೆ ನೀಡಿದ 1846 ಎಕರೆ ಜಮೀನಿನಲ್ಲಿ ಸಂಸ್ಥೆಯು ತನ್ನ ಉದ್ದೇಶಿತ ಕಾರ್ಯ ಚಟುವಟಿಕೆಗಳಿಗಾಗಿ ಉಪಯೋಗಿಸಿಕೊಂಡು ಸಂಸ್ಥೆಗೆ ಅವಶ್ಯವಿಲ್ಲದ 967.20 ಜಮೀನನ್ನು ಹೆಚ್ಚುವರಿ ಜಮೀನೆಂದು ನಿರ್ಧರಿಸಿ ಸರ್ಕಾರವು ಹಿಂತೆಗೆದುಕೊಂಡಿದೆ. ಬಿಜಿಎಂಎಲ್‍ನಿಂದ ಯಾವುದೇ ಜಮೀನನ್ನು ಹಿಂತೆಗೆದುಕೊಂಡಿರುವುದಿಲ್ಲ. ಬಿಇಎಂಎಲ್ ನಿಂದ ಹಿಂತೆಗೆದುಕೊಡ ಜಮೀನಿನ ಪೈಕಿ 658.20 ಎಕರೆ ಜಮೀನನ್ನು ಕೆಐಡಿಬಿಗೆ ಮಂಜೂರು ಮಾಡಲಾಗಿದೆ. ಕೆಐಡಿಬಿ ಯಿಂದ ಇಲ್ಲಿಯವರೆಗೆ ಯಾವುದೇ ಕಂಪನಿಗೆ ಹಂಚಿಕೆ ಮಾಡಿರುವುದಿಲ್ಲ. ಹಂಚಿಕೆ ದರ ನಿಗದಿ ಸಂಬಂಧ ಮಂಡಳಿಯ ಸಭೆಯಲ್ಲಿ ನಿರ್ಣಯಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಗ್ಯಾರಂಟಿಗಳಿಗಾಗಿ ರೂ.76,509 ಕೋಟಿ ಹಣ ಖರ್ಚು ಮಾಡಿದ್ದೇವೆ: ಸಿಎಂ ಸಿದ್ಧರಾಮಯ್ಯ
ಬಾಹ್ಯಾಕಾಶದಲ್ಲಿ ಸಿಲುಕಿದ್ದ ‘ಸುನೀತಾ ವಿಲಿಯಮ್ಸ್’ಗೆ ನಾಸಾ ಎಷ್ಟು ಪಾವತಿ ಗೊತ್ತಾ? | Sunita Williams