ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವುದು, ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸುವುದು, ಒತ್ತುವರಿ ತೆರವುಗೊಳಿಸಲು ವಿಫಲರಾಗಿರುವ ಅಧಿಕಾರಿಗಳು, ಭೂ ಕಬಳಿಕೆಗೆ ದುಷ್ಪ್ರೇರಣೆ ನೀಡುವ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಶಾಮೀಲಾದ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕಾನೂನು, ಶಿಸ್ತು ಕ್ರಮದ ಬಗ್ಗೆ ಸರ್ಕಾರ ಮಹತ್ವದ ಆದೇಶ ಮಾಡಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಸರ್ಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿಗಳ ತೆರವುಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವಿಕೆ ಕುರಿತು ವರದಿ ಸಂಖ್ಯೆ: 05/2018 ಸಲ್ಲಿಸಿರುತ್ತಾರೆ. ಸದರಿ ವರದಿಯ ಬಗ್ಗೆ ಕರ್ನಾಟಕ ವಿಧಾನ ಮಂಡಲದ 2019-20ನೇ ಸಾಲಿನ 14.01.2020ರಂದು ಸಭೆ ನಡೆಸಿದ್ದು, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ದಿನಾಂಕ: 07.01.2020 ಮತ್ತು ಕಬಳಿಕೆಯಾಗಿರುವ ಸರ್ಕಾರಿ ಜಮೀನುಗಳನ್ನು ಹಿಂಪಡೆಯುವ ಪ್ರಕ್ರಿಯೆ ಮಂದ ಗತಿಯಲ್ಲಿಯಲ್ಲಿರುವುದು, ಭೂ ಕಬಳಿಕೆದಾರರು ಹಾಗೂ ದುಷ್ಟೇರಣೆ ನೀಡಿದವರ ವಿರುದ್ಧ ಕಠಿಣ ಕ್ರಮಗಳಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ ಎಂದಿದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 192 192-29 ಹಾಗೂ 192-A ಅಡಿಯಲ್ಲಿ ಸರ್ಕಾರಿ ಸ್ವತ್ತು ಅತಿಕ್ರಮಣ ಮಾಡುವುದು, ಸರ್ಕಾರಿ ಸ್ವತ್ತನ್ನು ಕಬಳಿಸುವ ಉದ್ದೇಶದಿಂದ ಬೊಟ್ಟ ದಾಖಲೆಗಳನ್ನು ಸೃಷ್ಟಿಸುವುದು, ಒತ್ತುವರಿ ತೆರವು ಮತ್ತಿತರ ಕಾರ್ಯಗಳನ್ನು ನಿರ್ವಹಿಸಲು ಅಧಿಕೃತ ಕಂದಾಯ ಅಧಿಕಾರಿ ವಿಫಲನಾಗುವುದು, ಭೂ ಕಬಳಿಕೆಗೆ ದುಷ್ಟೇರಣೆ ನೀಡುವುದು ಮುಂತಾದ ಅಪರಾಧಗಳಿಗಾಗಿ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ಜಮೀನು ಒತ್ತುವರಿ ತೆರವು ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರವು ಉಲ್ಲೇಖ(3)ರ ಸುತ್ತೋಲೆಯಲ್ಲಿ 10 ಸೂಚನೆಗಳನ್ನು ನೀಡಿರುತ್ತದೆ. ತದನಂತರ ಸರ್ಕಾರಿ ಜಮೀನು ಒತ್ತುವರಿ ಪ್ರಕ್ರಿಯೆಯನ್ನು ತೀವ್ರಗೊಳಿಸುವ ಸಲುವಾಗಿ ಸರ್ಕಾರವು ಉಲ್ಲೇಖ(4)ರ ಆದೇಶದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಪಡೆಗಳನ್ನು ರಚಿಸಿ, ಅನುಸರಿಸಬೇಕಾದ ಕ್ರಮಗಳ ಬಗ್ಗ ಸೂಚನೆಗಳನ್ನು ನೀಡಲಾಗಿರುತ್ತದೆ. ಮುಂದುವರೆದು, ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 94ರ ಅನ್ವಯ ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸಿರುವ ಪ್ರಕರಣಗಳಲ್ಲಿ ಒತ್ತುವರಿದಾರರಿಂದ ದಂಡ ವಸೂಲು ಮಾಡುವ ಬಗ್ಗೆ ಸರ್ಕಾರವು ಉಲ್ಲೇಖ(5)ರ ಸುತ್ತೋಲೆಯಲ್ಲಿ ವಿವರವಾದ ಸೂಚನೆಗಳನ್ನು ನೀಡಲಾಗಿರುತ್ತದೆ.
ಭಾರತದ ಲೆಕ್ಕನಿಯಂತರಕರು ಮತ್ತು ಮಹಾಲೆಕ್ಕಪರಿಶೋಧಕರು ಸಲ್ಲಿಸಿರುವ ಬಗ್ಗೆ ಕರ್ನಾಟಕ ವಿಧಾನ ಮಂಡಲದ 2019-20ನೇ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಸಭೆಗಳಲ್ಲಿ ವರದಿ ಸಂಖ್ಯೆ: 05/2018ರ ಕಬಳಿಕೆಯಾಗಿರುವ ಸರ್ಕಾರಿ ಜಮೀನುಗಳನ್ನು ಹಿಂಪಡೆಯುವ ಪ್ರಕ್ರಿಯೆ ಮಂದ ಗತಿಯಲ್ಲಿಯಲ್ಲಿರುವುದು, ಅನಧಿಕೃತ ಒತ್ತುವರಿದಾರರ ವಿರುದ್ಧ ನಿರೀಕ್ಷಿತ ಮಟ್ಟದಲ್ಲಿ ಕ್ರಮವಾಗದಿರುವುದನ್ನು ಅಕ್ರಮ/ಸುಳ್ಳು ದಾಖಲೆಗಳ ಆಧಾರದ ಮೇಲೆ ಭೂ ಕಬಳಿಕೆ ಮಾಡಿರುವವರು ಹಾಗೂ ಅಕ್ರಮ ದಾಖಲೆಗಳನ್ನು ಸೃಷ್ಟಿಸಿಕೊಟ್ಟವರ ವಿರುದ್ಧ ಕ್ರಮ ಜರುಗಿಸದೇ ಇರುವುದರಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ/ಸಾರ್ವಜನಿಕ ಜಮೀನುಗಳು ಸರ್ಕಾರದ ಕೈತಪ್ಪಿ ಹೋಗಿರುವುದೇ ಅಲ್ಲದೆ, ಭೂ ಕಬಳಿಕೆದಾರರು ಕಾನೂನಿನ ಹಿಡಿತದಿಂದ ನುಣುಚಿಕೊಂಡು ಹೋಗುತ್ತಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಆದ್ದರಿಂದ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ಹಾಗೂ ಕಬಳಿಕೆಯಾಗಿರುವ ಸ್ವತ್ತುಗಳನ್ನು ಹಿಂಪಡೆಯಲು ಎಲ್ಲಾ ಜಿಲ್ಲಾಧಿಕಾರಿಗಳು ಈ ಕೆಳಕಂಡಂತೆ ತುರ್ತು ಕ್ರಮ ವಹಿಸತಕ್ಕದ್ದು
- ಜಿಲ್ಲಾಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಬಾಕಿ ಇರುವ ಪ್ರಕರಣಗಳು ಹಾಗೂ ಇದುವರೆಗೆ ಸ್ವೀಕೃತವಾಗಿರುವ ದೂರುಗಳನ್ನು ಇನ್ನು 15 ದಿನಗಳ ಅವಧಿಯೊಳಗೆ ಸಂಪೂರ್ಣವಾಗಿ ಪರಾಮರ್ಷಿಸುವುದು.
- ನಗರ ಪ್ರದೇಶ/ ವಾಣಿಜ್ಯ/ಕೈಗಾರಿಕೆ/ಇನ್ನಿತರ ಉದ್ದಿಮೆಗಳಿಗೆ ಅನಧಿಕೃತವಾಗಿ ಸರ್ಕಾರಿ ಜಮೀನು ಬಳಸಿರುವ ಒತ್ತುವರಿ ಪ್ರಕರಣಗಳನ್ನು ಅತಿ ಗಂಭೀರ ಎಂದು ಪರಿಗಣಿಸಿ ಒತ್ತುವರಿದಾರರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸುವುದು.
- ಜಿಲ್ಲಾಧಿಕಾರಿಗಳು ನಿಗದಿಪಡಿಸುವ ಗುರಿ ಮತ್ತು ಕಾಲಮಿತಿಯಲ್ಲಿ ಕ್ರಮ ಜರುಗಿಸದೇ ಇರುವುದು, ನಿರ್ಲಕ್ಷತನ ತೋರಿಸುವುದು, ವಿಳಂಬ ನೀತಿ ಅನುಸರಿಸುವುದು, ಒತ್ತುವರಿ ತೆರವುಗೊಳಿಸಲು ವಿಫಲರಾದ ಅಧಿಕಾರಿ, ಸಿಬ್ಬಂಧಿಗಳನ್ನು ಗುರುತಿಸಿ ಅವರುಗಳ ವಿರುದ್ಧ ಕಲಂ 192ಎ/192ಬಿ ಅನ್ವಯ ತಪ್ಪದೇ ಕ್ರಮ ಜರುಗಿಸುವುದಲ್ಲದೆ, ತಕ್ಷಣವೇ ಇಲಾಖೆ ವತಿಯಿಂದ ಶಿಸ್ತು ಕ್ರಮಗಳನ್ನು ಜರುಗಿಸತಕ್ಕದ್ದು. ಹಾಗೆಯೇ ಸದರಿ ಒತ್ತುವರಿ ತೆರವುಗೊಳಿಸಲು ಪರ್ಯಾಯ ವ್ಯವಸ್ಥೆಯನ್ನು ಸಹ ಮಾಡುವುದು.
- ನಕಲಿ ದಾಖಲೆಗಳ ಆಧಾರದ ಮೇಲೆ ಭೂ ಕಬಳಿಕೆಯಾಗಿದೆಯೆಂದು ಬಂದಿರುವ ದೂರು ಅಥವಾ ಸ್ವತ: ಗಮನಿಸಿರುವ ಪ್ರಕರಣಗಳನ್ನು ತೀರ್ಮಾನಿಸಲು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸುವುದು, ಇಂತಹ ಪ್ರಕರಣಗಳನ್ನು ಪ್ರತ್ಯೇಕವಾಗಿ ಪರಾರ್ಷಿಸುವುದು.
- ನಕಲಿ ದಾಖಲೆಗಳನ್ನು ಸೃಷ್ಟಿಸುವಲ್ಲಿ ಸರ್ಕಾರಿ ಅಧಿಕಾರಿ/ಸಿಬ್ಬಂಧಿಗಳು ಶಾಮೀಲಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಲ್ಲಿ ಕೂಡಲೇ ಅಂತಹವರನ್ನು ಸೇವೆಯಿಂದ ಅಮಾನತ್ತಿನಲ್ಲಿಡಲು ಕ್ರಮ ಜರುಗಿಸುವುದು.
- ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟಿರುವುದು ಸಾಬೀತು ಆದಲ್ಲಿ ತಕ್ಷಣವೇ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವುದು.
- ನ್ಯಾಯಾಲಯ ತಡೆಯಾಜ್ಞೆ ಜಾರಿಯಲ್ಲಿ ಇದ್ದಲ್ಲಿ, ತಡೆಯಾಜ್ಞೆ ತೆರವು ಮಾಡಿಸಲು ತಕ್ಷಣವೇ ಕ್ರಮ ಜರುಗಿಸುವುದು ಹಾಗೂ ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು.
- ಸರ್ಕಾರಿ ಸ್ವತ್ತುಗಳಿಗೆ ಸಂಬಂಧಪಟ್ಟಂತೆ ದಾಖಲಾಗಿರುವ ನ್ಯಾಯಾಲಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಕ್ಷೇತ್ರ ಮಟ್ಟದ ಅಧಿಕಾರಿಗಳು ನಿರ್ವಹಿಸುವುದನ್ನು ಖಚಿತಪಡಿಸಿ ಕೊಳ್ಳುವುದು.
- ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ನ್ಯಾಯಾಲಯದ ಆದೇಶವಾಗಿದ್ದಲ್ಲಿ, ಯಾವುದೇ ವಿಳಂಬವಿಲ್ಲದೆ ಕಾನೂನು ಸಲಹೆ ಪಡೆದು, ಮೇಲ್ಮನವಿ ಸಲ್ಲಿಸಲು ಅಗತ್ಯ ಕ್ರಮಗಳನ್ನು ಜರುಗಿಸುವುದು.
- ಗುತ್ತಿಗೆ ನೀಡಿರುವ ಸರ್ಕಾರಿ ಜಮೀನುಗಳನ್ನು ಪ್ರಕರಣವಾರು ಪರಾಮರ್ಷಿಸಿ, ಗುತ್ತಿಗೆ ಷರತ್ತುಗಳು ಪಾಲನೆಯಾಗಿರುವ ಬಗ್ಗೆ, ಗುತ್ತಿಗೆ ಹಣ ಕಾಲಕಾಲಕ್ಕೆ ಪಾವತಿಸಿರುವ ಬಗ್ಗೆ, ಗುತ್ತಿಗೆ ಮುಗಿದಿರುವ ಪ್ರಕರಣಗಳಲ್ಲಿ ಸರ್ಕಾರಿ ಜಮೀನು ಹಿಂಪಡೆಯುವ ಬಗ್ಗೆ ಜಿಲ್ಲಾಧಿಕಾರಿಗಳು ಪರಾಮರ್ಷಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು
- ಭೂ ಮಂಜರಾತಿಯಾದ ಪ್ರಕರಣಗಳಲ್ಲಿಯೂ ಸಹ ಮಂಜೂರತಿ ಷರತ್ತು ಮತ್ತು ನಿಬಂಧನೆಗಳು ಪಾಲನೆಯಾಗಿರುವ ಬಗ್ಗೆ ಪರಾಮರ್ಷಿಸಿ, ಉಲ್ಲಂಘನೆಯಾಗಿರುವ ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ಜರುಗಿಸುವುದು.
- ಇದೇ ರೀತಿ ಭೂ ಸುಧಾರಣಾ ಕಾಯಿದೆ ಉಲ್ಲಂಘನೆಯಾಗಿರುವ ಪ್ರಕರಣಗಳನ್ನು ಸಹ ಗುರುತಿಸಿ, ಪರಾಮರ್ಷಿಸಿ ಅಗತ್ಯ ಕಾನೂನು ಕ್ರಮಗಳನ್ನು ಜರುಗಿಸುವುದು.
- ಒತ್ತುವರಿ ತೆರವು ಮಾಡಿ ಸರ್ಕಾರದ ವಶಕ್ಕೆ ಪಡೆದ ಜಮೀನುಗಳು ಪುನ: ಒತ್ತುವರಿಯಾಗದಂತೆ ಸಂರಕ್ಷಣಾ ಕ್ರಮ ಅಂದರ ಸಂದರ್ಭಾನುಸಾರ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟು, ಪುನ: ಒತ್ತುವರಿಯಾಗದಂತೆ ತಂತಿ ಬೇಲಿ ಹಾಕಿಸುವುದು, ಸುತ್ತಲೂ ಕಂದಕ ನಿರ್ಮಿಸುವುದು ಅಥವಾ ನಾಮ ಫಲಕ ಹಾಕಿಸುವ ಕಾಮಗಾರಿಗಳನ್ನು ಮಾಡಿಸುವುದು.
- ದಿನಾಂಕ 02-02-2019ರ ಸುತ್ತೋಲೆಯಂತೆ ಒತ್ತುವರಿದಾರರಿಂದ ದಂಡ ವಸೂಲಿ ಮಾಡಿಸಿ, ಸಾಧಿಸಿದ ಪ್ರಗತಿ ಬಗ್ಗೆ ವರದಿ ಸಲ್ಲಿಸುವುದು.
- ಎಲ್ಲಾ ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನು ಒತ್ತುವರಿ ತೆರವು ಹಾಗೂ ಮೇಲ್ಕಂಡ ಅಂಶಗಳ ಬಗ್ಗೆ ತಿಂಗಳಿಗೊಮ್ಮೆ ತಪ್ಪದೇ ಪರಾಮರ್ಷಿಸುವುದು. ತಪ್ಪದೇ ಡಿಸಿಗಳು ಪಾಲಿಸುಂತೆ ಸರ್ಕಾರ ಸೂಚಿಸಿದೆ.
ರಾಮ ಜನ್ಮ ಭೂಮಿ ಟ್ರಸ್ಟ್ ನಿಂದ ಸರ್ಕಾರಕ್ಕೆ 5 ವರ್ಷಗಳಲ್ಲಿ 400 ಕೋಟಿ ತೆರಿಗೆ ಪಾವತಿ
BIG NEWS: `ಇ ಖಾತಾ’ ಇಲ್ಲದೆ ಆಸ್ತಿ ನೋಂದಣಿ ಇಲ್ಲ: ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ.!