ಕೋಲಾರ : ಡ್ರಿಲ್ ಮಾಡುವ ಸಂದರ್ಭದಲ್ಲಿ ಕಲ್ಲು ಬಂಡೆ ತಗೊಂಡು ಕಲ್ಲು ಬಿದ್ದು ಕಾರ್ಮಿಕ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಕಾರಹಳ್ಳಿಯಲ್ಲಿರುವ ಸ್ನೇಹ ಕ್ರಷರ್ ತಾತ್ಕಾಲಿಕವಾಗಿ ಬಂದ್ ಮಾಡಲು ಆದೇಶಿಸಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಈ ಕುರಿತು ಆದೇಶಿಸಿದ್ದಾರೆ. ಉಪ ನಿರ್ದೇಶಕ ಕೋದಂಡರಾಮಯ್ಯ ಅವರಿಂದ ಆದೇಶ ಹೊರಡಿಸಲಾಗಿದೆ. ಡ್ರಿಲ್ಲಿಂಗ್ ವೇಳೆ ಕಲ್ಲು ಬಿದ್ದು ಕಾರ್ಮಿಕ ವೆಂಕಟೇಶ್ ಸಾವನ್ನಪ್ಪಿದ್ದರು. ಆಂಧ್ರಪ್ರದೇಶ ಮೂಲದ ಕಾರ್ಮಿಕ ವೆಂಕಟೇಶ್ ಕಲ್ಲು ಬಿದ್ದು ಮೃತಪಟ್ಟಿದ್ದರು. ಕೆಲವು ಗಣಿ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ನಿಯಮ ಸರಿಪಡಿಸಿಕೊಳ್ಳುವವರೆಗೆ ಕೆಲಸ ನಿಲ್ಲಿಸಲು ಆದೇಶ ಹೊರಡಿಸಿದ್ದಾರೆ.