ಬೆಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣದಲ್ಲಿ ಸದ್ಯ ನಟಿ ರನ್ಯಾರಾವ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನು ಇದೇ ಪ್ರಕರಣದಲ್ಲಿ ಡಿ ಆರ್ ಐ ಅಧಿಕಾರಿಗಳು ನಟಿ ರನ್ಯಾರಾವ್ ಅವರ ಪತಿ ಜತಿನ್ ಹುಕ್ಕೇರಿ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದರು.
ಬಳಿಕ ಜತಿನ್ ಹುಕ್ಕೇರಿ ಅವರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಜತಿನ್ ಹುಕ್ಕೇರಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ. ಹಾಗಾಗಿ ಜತಿನ್ ಹುಕ್ಕೇರಿಗೆ ಸದ್ಯಕ್ಕೆ ಈ ಒಂದು ಪ್ರಕರಣದಿಂದ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಅಲ್ಲದೇ ಇತ್ತೀಚಿಗೆ ನಟಿ ರನ್ಯಾ ರಾವ್ ದುಬೈಗೆ ತೆರಳಲು ಪತಿ ಜತಿನ್ ಹುಕ್ಕೇರಿ ಕ್ರೆಡಿಟ್ ಕಾರ್ಡ್ ಬಳಸಿ ಟಿಕೆಟ್ ಬುಕ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿರುವ ಡಿಆರ್ ಐ ಅಧಿಕಾರಿಗಳು ಬೆಂಗಳೂರಿನ ಆಡುಗೋಡಿ ವ್ಯಾಪ್ತಿಯಲ್ಲಿರುವ ಜತಿನ್ ನಿವಾಸ ಪ್ರೆಸ್ಟೀಜ್ ಅಕ್ರಾಪೊಲಿಸ್ ಅಪಾರ್ಟ್ ಮೆಂಟ್ ನಿವಾಸದ ಮೇಲೆ ದಾಳಿ ನಡೆಸಿದ್ದರು.