ಬೆಂಗಳೂರು: ನಗರದ ಸಂಚಾರಿ ಪೊಲೀಸರು ಅಮಾನವೀಯ ನಡೆಯನ್ನು ತೋರಿದ್ದಾರೆ. ಬೈಕ್ ಸವಾರನೊಬ್ಬನಿಗೆ ಬೂಟು ಕಾಲಿನಿಂದ ಮೂರ್ಛೆ ಹೋಗುವಂತೆ ಥಳಿಸಿದಂತ ಘಟನೆ ವಿಜಯನಗರ ಸಂಚಾರಿ ಠಾಣೆಯಲ್ಲಿ ನಡೆದಿದೆ.
ಬೆಂಗಳೂರಿನ ವಿಜಯನಗರ ಟ್ರಾಫಿಕ್ ಪೊಲೀಸರ ವಿರುದ್ಧ ಬೈಕ್ ಸವಾರನೊಬ್ಬ ಈ ಗಂಭೀರ ಆರೋಪವನ್ನು ಮಾಡಿದ್ದಾನೆ. ವಿಜಯನಗರ ಸಂಚಾರ ಠಾಣೆಯ ಎಸ್ಐ ಶಾಂತರಾಮ್ ಹಾಗೂ ಸಿಬ್ಬಂದಿ ಸಿದ್ಧಿಕಿ ಎಂಬುವರು ತಮಗೆ ಬೂಟು ಕಾಲಿನಿಂದ ಒದ್ದು ಥಳಿಸಿದ್ದಾಗಿ ಆರೋಪಿಸಿದ್ದಾನೆ.
ವಿಜಯನಗರ ಸಂಚಾರಿ ಠಾಣೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಥಳಿತದಿಂದ ಬೈಕ್ ಸವಾರ ಮೂರ್ಛೆ ಹೋಗಿ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂಚಾರಿ ಪೊಲೀಸರ ಈ ಅಮಾನವೀಯ ಕೃತ್ಯಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.