ಬೆಂಗಳೂರು: ನಗರದಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಆಟೋಗೋ ಕಾರೊಂದು ಗುದ್ದಿ ಪರಾರಿಯಾದ ಪರಿಣಾಮ, ಚಾಲಕನ ಕಾಲು ಮುರಿದು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆ ಆರ್ ಮಾರ್ಕೆಟ್ ಫ್ಲೈ ಓವರ್ ಮೇಲೆ ಆಟೋ ಒಂದಕ್ಕೆ ಇನ್ನೋವಾ ಕಾರೊಂದು ಗುದ್ದಿದೆ. ಈ ಪರಿಣಾಮ ಆಟೋ ಚಾಲಕ ವಸೀಂ ಪಾಷಾ ಎಂಬುವರ ಕಾಲು ಮುರಿತಗೊಂಡಿದೆ.
ಈ ಹಿಟ್ ಅಂಡ್ ರನ್ ಬಳಿಕ ಇನ್ನೋವಾ ಕಾರು ಚಾಲಕ ವಾಹನ ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಆಟೋ ಸಂಪೂರ್ಣ ಜಖಂ ಗೊಂಡಿದೆ. ಗಾಯಾಳು ಆಟೋ ಚಾಲಕ ವಸೀಂ ಪಾಷಾನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಚಾಮರಾಜಪೇಟೆ ಠಾಣೆಯ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವಂತ ಇನ್ನೋವ ಕಾರು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.
‘ನಟ ಮಮ್ಮುಟ್ಟಿ’ಗೆ ಕ್ಯಾನ್ಸರ್ ರೋಗ ಎಂಬುದು ಸುಳ್ಳು ಸುದ್ದಿ: ಸ್ನೇಹಿತರ ಸ್ಪಷ್ಟನೆ | Actor Mammootty
BIG NEWS: `ಇ ಖಾತಾ’ ಇಲ್ಲದೆ ಆಸ್ತಿ ನೋಂದಣಿ ಇಲ್ಲ: ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ.!