ವಿಜಯನಗರ : ಸಮರ್ಪಕವಾದ ಉತ್ತರ ನೀಡದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಿರುದ್ಧ ಲೋಕಾಯುಕ್ತ ಇದೀಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ.
ನಿನ್ನೆ ಕಚೇರಿಗೆ ಭೇಟಿ ನೀಡಿದ ವೇಳೆ ಸಮರ್ಪಕವಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಉಪ ಲೋಕಾಯುಕ್ತ ಬಿ ವೀರಪ್ಪ, ಹೊಸಪೇಟೆ ನಗರದಲ್ಲಿರುವ ಇಲಾಖೆ ಕಚೇರಿಗೆ ಬಿ.ವಿರಪ್ಪ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದರು.
ಇಲಾಖೆ ಕಚೇರಿಗೆ ಉಪಲೋಕಾಯುಕ್ತ ಬಿ ವೀರಪ್ಪ ನೆನ್ನೆ ಭೇಟಿ ನೀಡಿದ್ದರು. 107 ಬಾಲ್ಯ ವಿವಾಹ ಪ್ರಕರಣಗಳ ಪೈಕಿ 49 FIR ದಾಖಲಿಸಲಾಗಿದೆ. ಕಚೇರಿ ಅಧಿಕ್ಷಕ ನಾಗಭೂಷಣ ಫೋನ್ ಪೇ ಹಾಗೂ ಯುಪಿಐ ಪರಿಶೀಲನೆ ಮಾಡಿದ್ದಾರೆ. ಫೋನ್ ಪೇ ಮತ್ತು ಯುಪಿಐ ಪರಿಶೀಲನೆ ಮಾಡಿದಾಗ ಅದು ಡಿಲೀಟ್ ಮಾಡಿದ್ದು ಗೊತ್ತಾಗಿದೆ.
ಉಪನಿರ್ದೇಶಕಿ ಶ್ವೇತಾ ಮೊಬೈಲ್ ಫೋನ್ ಪೆ ವಹಿವಾಟು ತಪಾಸಣೆ ಮಾಡಿದ್ದಾರೆ. ಗನ್ ಮ್ಯಾನ್ ಮೂಲಕ ಚೆಕ್ ಮಾಡಿಸಿದಾಗ ಹಣದ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಬಿ ವಿರಪ್ಪ ಉಪನಿರ್ದೇಶಕಿ ಶ್ವೇತಾ ಅವರನ್ನು ಪ್ರಶ್ನೆ ಮಾಡಿದಾಗ ಸಮರ್ಪಕವಾದ ಉತ್ತರ ನೀಡಿಲ್ಲ ಹಾಗಾಗಿ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.