ಬೆಂಗಳೂರು : 2005-06 ಮತ್ತು 2006-07 ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ಶಿಕ್ಷಕರರು ಹಳೆಯ ಡಿಫೈನ್ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂದಿಸಿದಂತೆ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ, ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ಶಿಕ್ಷಕರುಗಳನ್ನು ಹಳೆಯ ಡಿಫ್ರೆಂಡ್ ಪಿಂಚಣಿ ಸೌಲಭ್ಯಕ, ಒಳಪಡಿಸುವ ಸಂಬಂಧ, ಬೆಂಗಳೂರು ಮತ್ತು ಮೈಸೂರು ವಿಭಾಗದ ಎಲ್ಲಾ ಜಿಲ್ಲಾ ಉಪನಿರ್ದೇಶಕರು ಸಲ್ಲಿಸಿದ್ದ ವಸ್ತಾವನೆಗಳನ್ನು ಉಲ್ಲೇಖ-02 ರ ಪತ್ರದಲ್ಲಿ ಅಡಕಗೊಳಿಸಿ ಸಲ್ಲಿಸಲಾಗಿತ್ತು
ಈ ಸಂಬಂಧ ಉಲ್ಲೇಖ-03 ರ ಪತ್ರದಲ್ಲಿ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸರ್ಕಾರದ ಆದೇಶ ಸಂಖ್ಯೆ ಅಇ-ಪಿಇಎನ್/99/2024 ದಿನಾಂಕ 24-01-2024 ರಸ್ತೆಯ ಎನ್.ಪಿ.ಎಸ್ ನಿಂದ ಒಪಿಎಸ್ ಗೆ ಒಳಪಡುವ ಎಲ್ಲಾ ಗ್ರೂಪ್ ಎ ಬಿ. ಸಿ ಮತ್ತು ಡಿ ನೌಕರರ ಇಲಾಖಾವಾರು ಕ್ರೋಡೀಕೃತ ನಮೂನೆ 01 & 02) ರಲ್ಲಿ ವಿವರಗಳನ್ನು ಇಲಾಖಾ ಮುಖ್ಯಸ್ಮರ ಸಹಿಯೊಂದಿಗೆ ದೃಢೀಕರಿಸಿ ಸಲ್ಲಿಸುವಂತಿ ಸೂಚಿಸಲಾಗಿದೆ.
ಅದರಂತೆ, ಬೆಂಗಳೂರು ಮತ್ತು ಮೈಸೂರು ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಉಪನಿರ್ದೇಶಕರು ತಮ್ಮ ಶಿಫಾರಸ್ಸಿನೊಂದಿಗೆ ಮಾಹಿತಿಯನ್ನು ಈ ಕಛೇರಿಗೆ ಸಲ್ಲಿಸಿದ್ದು ಸದರಿ ಮಾಹಿತಿಯನ್ನು ಅಗತ್ಯ ದೃಡೀಕರಣದೊಂದಿಗೆ ಸರ್ಕಾರದ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ.